ಸುಳ್ಯ:ಮಕ್ಕಳಿಲ್ಲದ ದಂಪತಿಗೆ ಮಕ್ಕಳನ್ನು ಕರುಣಿಸುವ ತಾಯಿ ಎಂದೇ ಪ್ರಸಿದ್ದರಾಗಿರುವ ಸುಳ್ಯ ತಾಲೂಕಿನ ವಳಲಂಬೆಯ ವಿಜಯಲಕ್ಷ್ಮೀ. ದಿನವೂ ಅನೇಕರು ಆಗಮಿಸಿ ಸಂತಾನ ಭಾಗ್ಯಕ್ಕಾಗಿ ಔಷಧಿ ಪಡೆಯುತ್ತಾರೆ.
ಸ್ತ್ರೀಯರ ದೈಹಿಕವಾದ ಎಲ್ಲಾ ಸಮಸ್ಯೆಗಳಿಗೆ ಹಾಗೂ ಸಂತಾನಭಾಗ್ಯಕ್ಕೆ ಕಾಡುಗಳಿಗೆ ತೆರಳಿ ಸಂಗ್ರಹಿಸುವ ಔಷಧೀಯ ಸಸ್ಯಗಳಿಂದ ಕಳೆದ 25 ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ವಿಜಯಲಕ್ಷೀ ಅವರು ವೇದ-ವೈದ್ಯ ಚಿಕಿತ್ಸೆಯ ಮೂಲಕ ಎಲ್ಲಾ ಸಮಸ್ಯೆ ದೂರ ಮಾಡಿ ಚಿಕಿತ್ಸೆ ನೀಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ.ವಳಲಂಬೆಯ ಆಂಗೀರಸ ವೇದಸದನದಲ್ಲಿರುವ ಕರುವಜೆ ಕೇಶವ ಜೋಯಿಸರ ಪತ್ನಿಯಾಗಿರುವ ಇವರು.ಮಕ್ಕಳಿಲ್ಲದ ಗಂಡಹೆಂಡತಿಗೆ ಮಕ್ಕಳನ್ನು ಈ ನಾಟಿವೈದ್ಯಕೀಯದ ಮೂಲಕ ಪಡೆಯುವಂತೆ ಮಾಡಿದ್ದಾರೆ.ಮೊದಲಾಗಿ ಅವರು ದಂಪತಿಯ ಜಾತಕಗಳನ್ನು ಪರಿಶೀಲನೆಗೆ ಇಡುತ್ತಾರೆ.ಬಹುತೇಕ ದಂಪತಿಗೆ ಪ್ರಜಾರ್ಥಿ ಹೋಮ ನೆರವೇರಿಸಲು ಸೂಚಿಸುತ್ತಾರೆ ಸಂತಾನ ಭಾಗ್ಯಕ್ಕೆ ಕರ್ಮಫಲವೂ ಕಾರಣವಾಗುತ್ತದೆ ಎನ್ನುವ ಅವರು ಇದಕ್ಕಾಗಿ ಜಾತಕ ವಿಮರ್ಶೆ ಮಾಡಿದ ಬಳಿಕ ಚಿಕಿತ್ಸೆ ನೀಡಬೇಕಾಗುತ್ತದೆ.ಒಂದು ವೇಳೆ ಪೂರ್ವಜನ್ಮದ ಫಲ ಇದ್ದರೆ ಮೊದಲು ಅದಕ್ಕಾಗಿ ಪರಿಹಾರ ಮಾಡಬೇಕಾಗುತ್ತದೆ ಎನ್ನುತ್ತಾರೆ.
ಕಳೆದ 25 ವರ್ಷಗಳಿಂದ ವಿವಿಧ ಚಿಕಿತ್ಸೆ ನೀಡುತ್ತಾ ಬಂದಿರುವ ಇವರು ಬಗೆಬಗೆಯ ಕಾಯಿಲೆಗಳಿಗೆ ಅವರ ಚಿಕಿತ್ಸೆ ಫಲಕಾರಿಯಾದ ನಿದರ್ಶನಗಳು ಕಾಣಿಸುತ್ತವೆ.ಪ್ರಮುಖವಾಗಿ ಕಾಲುಗಳಲ್ಲಿ ಕಂಡುಬರುವ ಆಣಿ, ಬುದ್ದಿಮಾಂಧ್ಯತೆ, ಕಣ್ಣು ನೋವು, ಕೆಡು ಸೇರಿದಂತೆ ದುರ್ಮಾಂಸಗಳ ನಿವಾರಣೆ,ಚರ್ಮರೋಗಗಳಿಗೆ, ಮಕ್ಕಳ ಸಮಸ್ಯೆಗಳಿಗೂ ಔಷಧಿ ನೀಡಿದ್ದಾರೆ.
……………………….
ಫೋಟೊ : ವಿಜಯಲಕ್ಷ್ಮಿ