ಬೆಂಗಳೂರು: ರಾಷ್ಟ್ರಪ್ರೇಮವಿಲ್ಲದ, ದೂರದೃಷ್ಟಿಯಿಲ್ಲದ, ಸ್ವಾರ್ಥದ, ಭ್ರಷ್ಟ ಮತ್ತು ಓಟ್ಬ್ಯಾಂಕ್ಗಾಗಿ ಓಲೈಕೆಯಲ್ಲಿ ತೊಡಗಿಕೊಂಡ ರಾಜಕಾರಣಿಗಳ ಕೈಗೆ ಆಡಳಿತ ಕೊಟ್ಟಾಗ ಏನೆಲ್ಲಾ ಅನಾಹುತಗಳು ಆಗಬಹುದು ಎಂಬುದಕ್ಕೆ “ನೌರು” ಒಂದು ಜ್ವಲಂತ ಉದಾಹರಣೆ. ಹೀಗಾಗಿ ನಮ್ಮ ಯೋಚನೆಗಳೆಲ್ಲಾ ಧನಾತ್ಮಕವಾಗಿರಬೇಕು ಎಂಬುದಕ್ಕೂ ಇದೊಂದು ಉದಾಹರಣೆ.
ಅದರ ಹೆಸರು ನೌರು. ವಿಸ್ತೀರ್ಣದಲ್ಲಿ, ಜನಸಂಖ್ಯೆಯಲ್ಲಿ ನಮ್ಮ ಒಂದು ಪುಟ್ಟ ಊರು. ಆದರೆ ಅದೊಂದು ಪೆಸಿಫಿಕ್ ಮಹಾಸಾಗರದ ಮಧ್ಯೆಯಿರುವ ಸಾರ್ವಭೌಮ ದ್ವೀಪರಾಷ್ಟ್ರ.ಹಕ್ಕಿಗಳ ಹಿಕ್ಕೆಯಿಂದಲೇ ಅದು ರೂಪುಗೊಂಡದ್ದು ಹೇಗೆ ವರವಾಯ್ತೋ ಹಾಗೇ ಶಾಪವಾಗಿಯೂ ಪರಿಣಮಿಸಿತು. ಆ ದೇಶದ ಬೆಳವಣಿಗೆ ಹಾಗೂ ಸರ್ವನಾಶ ಅತ್ಯಂತ ಕುತೂಹಲಕಾರಿಯಾಗಿದೆ. ಹಾಗೂ ನಮಗೂ ಯೋಚಿಸುವಂತೆ ಮಾಡುತ್ತದೆ.
ನೌರು ದ್ವೀಪದಲ್ಲಿ ಸಾವಿರಾರು ವರ್ಷಗಳಿಂದ ಸಮುದ್ರ ಹಕ್ಕಿಗಳ ಹಿಕ್ಕೆಗಳ ದಪ್ಪನೆಯ ಪದರ ನಿರ್ಮಾಣವಾಗಿತ್ತು. ಹೀಗಾಗಿ ಈ ಫಾಸ್ಫೇಟ್ ಬಳಸಿದರೆ ಗಿಡಗಳು ಹುಲುಸಾಗಿ ಬೆಳೆಯುತ್ತವೆಯೆಂದು ಕಂಡುಕೊಳ್ಳಲಾಯ್ತು. ಯೂರೋಪಿಯನ್ನರಿಂದ ಫಾಸ್ಫೇಟ್ಗಣಿಗಾರಿಕೆ ಆರಂಭವಾಯ್ತು. ಇಲ್ಲಿಯ ಮೂಲ ನಿವಾಸಿಗಳು ಕೂಲಿ ಕಾರ್ಮಿಕರಾದರು. ದ್ವೀಪದ ಒಡೆತನಕ್ಕಾಗಿ ವಸಾಹತುಶಾಹಿಗಳ ನಡುವೆ ಸಣ್ಣ ಯುದ್ದಗಳು ಹಾಗೂ ಮಹಾಯುದ್ದಗಳ ನಡೆದುವು. ದ್ವೀಪದ ಒಡೆತನ ಹಲವು ಬಾರಿ ಕೈಬದಲಾದವು.ಗಣಿಗಾರಿಕೆ ಮೂಲಕ ದ್ವೀಪದ ಫಾಸ್ಫೇಟ್ಲೂಟಿ ಮಾಡಿದರು. ತಮ್ಮ ಅಧೀನದ ಬೇರೆ ರಾಷ್ಟ್ರಗಳಿಗೆ ಮಾರಿದರು. ಕೊನೆಗೆ 31 ಜನವರಿ 1968 ರಂದು ಸಂಪೂರ್ಣ ಸ್ವಾತಂತ್ರ ಪಡೆದು ವಿಶ್ವದ ಅತೀ ಸಣ್ಣ ಗಣತಂತ್ರ ದೇಶವಾಯ್ತು. ಇದು ನೌರುವಿನ ಹಿನ್ನೆಲೆ.
1968ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವ ಹೊತ್ತಿಗಾಗಲೇ ಸಂಸ್ಕೃತಿ ನಾಶದ ಭರ್ಭರತೆಗೆ ಸಿಲುಕಿತ್ತು ನೌರು. ಕೇವಲ ನೂರಿನ್ನೂರು ವರ್ಷಗಳಲ್ಲಿ ತಮ್ಮತನವನ್ನೆಲ್ಲಾ ಕಳೆದುಕೊಂಡ ಜನ ಎಡಬಿಡಂಗಿಗಳಾಗಿಬಿಟ್ಟಿದ್ದರು. ಆದರೂ ಹತಾಶೆಗೊಳಗಾಗದೆ ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬಲ್ಲ ಸುವರ್ಣಾವಕಾಶವಿನ್ನೂ ಅದಕ್ಕಿತ್ತು. 1970ರಲ್ಲಿ ಫಾಸ್ಫೇಟ್ ಗಣಿಗಾರಿಕೆ ಸಂಪೂರ್ಣ ನೌರುವಿನ ಒಡೆತನಕ್ಕೆ ಬಂತು. ‘ನೌರು ಫಾಸ್ಫೇಟ್ ಕಾಪೆರ್Çರೇಶನ್’ ಮೂಲಕ ಗಣೆಗಾರಿಕೆಯಿಂದ ಬಂದ ಹಣ ‘ನೌರು ಫಾಸ್ಫೇಟ್ರಾಯಲ್ಟೀಸ್ಟ್ರಸ್ಟ್’ ನಲ್ಲಿ ನೌರು ಪ್ರಜೆಗಳ ಸಂಪತ್ತಾಗಿ ಜಮೆಯಾಯ್ತು.
ಗಣಿಗಾರಿಕೆ ಎಷ್ಟು ಅವ್ಯಾಹತ ಮತ್ತು ವಿವೇಚನಾರಹಿತವಾಗಿ ನಡೆಯಿತೆಂದರೆ ಅತಿ ಶೀಘ್ರದಲ್ಲೇ ತಲಾ ಆದಾಯದ ಲೆಕ್ಕಾಚಾರದಲ್ಲಿ ಭೂಗ್ರಹದ ಮೇಲಿನ ಎರಡನೇ ಅತೀ ಶ್ರೀಮಂತ ರಾಷ್ಟ್ರವಾಯ್ತು.ಅಷ್ಟೇ ಅಲ್ಲ ಐಶಾರಾಮಿ ಜೀವನಮಟ್ಟದಲ್ಲೂ ವಿಶ್ವದ ಗಮನ ಸೆಳೆಯಿತು.
ಆದರೆ ರಾಷ್ಟ್ರಪ್ರೇಮವಿಲ್ಲದ, ದೂರದೃಷ್ಟಿಯಿಲ್ಲದ ಓಟ್ಬ್ಯಾಂಕ್ಗಾಗಿ ಓಲೈಕೆಯಲ್ಲಿ ತೊಡಗಿಕೊಂಡ ರಾಜಕಾರಣಿಗಳ ಕೈಗೆ ಆಡಳಿತ ಕೊಟ್ಟಾಗ ಏನೆಲ್ಲಾ ಅನಾಹುತಗಳು ಆಗಬಹುದು ಎಂಬುದಕ್ಕೆ ನೌರು ಒಂದು ಜ್ವಲಂತ ಉದಾಹರಣೆ. ನಮಗೆಲ್ಲಾ ತಿಳಿದಿರುವಂತೆ ಫಾಸ್ಫೇಟ್ ನವೀಕರಿಸಲಾಗದ ಒಂದು ನೈಸರ್ಗಿಕ ಸಂಪತ್ತು.ನೌರು ಫಾಸ್ಫೇಟ್ ಮುಗಿದುಹೋಗುವ ಮೊದಲೇದೇಶ ಏನಾದರೊಂದು ಪರ್ಯಾಯ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಬಹಳ ಮುಂಚಿತವಾಗಿಯೇ ವಿಶ್ವದ ಕೆಲವು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದರು. 1993 ರಲ್ಲಿ ನೌರುವಿನ ಒಟ್ಟು ಜನಸಂಖ್ಯೆ ಸುಮಾರು ಹತ್ತು ಸಾವಿರದ ಒಳಗೆ. ಅಂದರೆ ನೌರುವಿನ ಅಷ್ಟೂ ಸಂಪತ್ತಿಗೆ ಅವರೇ ಒಡೆಯರು. ಒಂದು ಬಿಲಿಯನ್ಆಸ್ಟ್ರೆಲಿಯನ್ ಡಾಲರ್ ‘ನೌರು ಫಾಸ್ಫೇಟ್ರಾಯಲ್ಟೀಸ್ಟ್ರಸ್ಟ್’ ನ ಅಂದಿನ ಸಂಪತ್ತು.
ಅಧಿಕಾರಕ್ಕಾಗಿ ನೌರುವಿನಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಆರಂಭವಾಯ್ತು. ಪೈಪೆÇೀಟಿಯಲ್ಲಿ ಭಾಗ್ಯಗಳ ಸುರಿಮಳೆಯಾಯ್ತು. ಇದಾಗಿ ನೌರುವನ್ನು ಕೇವಲ ಹದಿನೈದಿಪ್ಪತ್ತು ವರ್ಷಗಳಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರದಿಂದ ಬಿಕಾರಿ ದೇಶವನ್ನಾಗಿ ಹೋಯಿತು. ಏಕೆಂದರೆ ‘ಕೂತುಣ್ಣುವ ಭಾಗ್ಯ’ ವನ್ನು ರಾಜಕಾರಣಿಗಳು ಕರುಣಿಸಿದರು. ಜನ ಖುಷ್ಆದರು. ಅಮೇರಿಕಾ ಮುಂತಾದ ಕಡೆಗಳಿಂದ ಡಬ್ಬಗಳಲ್ಲಿ ಪ್ಯಾಕ್ಮಾಡಲಾದ ಬಗೆ ಬಗೆ ರುಚಿಕರ ಆಹಾರಗಳನ್ನು ಆಮದು ಮಾಡಿಕೊಳ್ಳಲಾಯ್ತು. ಎಲ್ಲವೂ ಉಚಿತ. ಜಂಕ್ಫುಡ್ತಿನ್ನುತ್ತಾ ಮಾಡಲೇನೂ ಕೆಲಸವಿಲ್ಲದೇ ಜನ ಧಢೂತಿಗಳಾಗುತ್ತಾ ಹೋದರು. ಕೇವಲ ಕಾಲ್ನಡಿಗೆಯಲ್ಲಿ ಇಡೀ ದ್ವೀಪವನ್ನು ಗಂಟೆಯೊಳಗೆ ಸುತ್ತಿಬರಬಲ್ಲ ದೇಶದಲ್ಲಿ ಐಶಾರಾಮಿ ಕಾರುಗಳಲ್ಲೇ ಓಡಾಡಿದರು. ಹೀಗೆ ಶ್ರೀಮಂತಿಕೆಯು ಉಚಿತಗಳಲ್ಲಿ ಕಾಲ ಕಳೆಯಿತು. ಬಯಸಿದ್ದೆಲ್ಲವೂ ಪುಕ್ಕಟೆಯಾಗಿ ದೊರೆಯಲು ಆರಂಭಿಸಿ ಜನಗಳಿಗೆ ಶಾಲೆಗೆ ಹೋಗಿ ಕಲಿತು ಏನಾದರೂ ಸಾಧನೆ ಮಾಡಬೇಕೆಂಬ ಛಲ ಕುಂಠಿತವಾಯ್ತು. ತತ್ಪರಿಣಾಮವಾಗಿ ಶೈಕ್ಷಣಿಕವಾಗಿ ಬೌದ್ದಿಕವಾಗಿ ಜನ ನಿರ್ವೀರ್ಯರಾದರು. ಕೆಲಸ ಮಾಡುವ ಯಾವುದೇ ಪ್ರಮೇಯವಾಗಲೀ, ಅವಶ್ಯಕತೆಯಾಗಲೀ ಅಥವಾ ಅನಿವಾರ್ಯತೆಯಾಗಲೀ ಇಲ್ಲವಾಯ್ತು. ಬೊಜ್ಜು ಸಂಬಂಧಿತ ಖಾಯಿಲೆಗಳಿಂದ ಜರ್ಝರಿತರಾದರು. ಕೊನೆಗೆ ದೀವಾಳಿತನದ ಒಂದು ಹಂತದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಅಕ್ರಮ ವಲಸಿಗರನ್ನು ಇಟ್ಟುಕೊಳ್ಳುವ ಜೈಲಾಗಲು ನೌರು ಒಪ್ಪಿಕೊಂಡಿತು ಆಸ್ಟ್ರೇಲಿಯಾ ನೀಡುವ ಪರಿಹಾರ ಹಣದ ಆಸೆಗಾಗಿ ಒಂದೊಮ್ಮೆ ತಮ್ಮ ಊಟವನ್ನು ತಾವೇ ದುಡಿದು ತಿನ್ನುತ್ತಿದ್ದ ಮುಗ್ದ ಜನ ದುಡಿಮೆಯನ್ನೇ ಮರೆತರು. ಒಂದು ಸುಂದರ ಶ್ರೀಮಂತ ರಾಷ್ಟ್ರದ ದುರಂತಮಯ ಅವನತಿಗೆ ಕಾರಣವಾಯಿತು.
ಹೀಗಾಗಿ ಇಂದು ಅಗತ್ಯವಾಗಿ ಬೇಕಿರುವುದು ದೇಶದ ಪ್ರಜೆಗಳನ್ನು ಯೋಚನೆಗೆ , ಚಿಂತನೆಗೆ ಹಚ್ಚಿಸಿ, ದೇಶದ ಪ್ರಗತಿಗರ ಕಾರಣವಾಗುವ, ದುಡಿಯಲು ಕಲಿಸುವಂತಹ ವ್ಯವಸ್ಥೆ ಆಗಬೇಕಿದೆ.
* ಲಕ್ಷ್ಮಣ ದೇವಸ್ಯ , ನಿವೃತ್ತ ಇಂಜಿನಿಯರ್ ಮತ್ತು ಕೃಷಿಕ