ಸುಳ್ಯ: ಗ್ರಾಮೀಣ ಶಾಲೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುತ್ತದೆ. ಸ್ಪರ್ಧೆ, ಕ್ರೀಡೆ, ಕಲಿಕೆಯಲ್ಲಿ ಹಳ್ಳಿ ಶಾಲೆಗೂ ಸದಾ ಮುಂದು. ಜೀವನದ ಚಾಕಚಕ್ಯತೆಯನ್ನು ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಬಹು ಬೇಗ ಪಡೆಯುತಾರೆ ಎಂಬುದಕ್ಕೆ ಬಾಳಿಲ ವಿದ್ಯಾಬೋಧಿನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಮೇಳವೇ ಪ್ರತ್ಯಕ್ಷ ಸಾಕ್ಷಿ.
ಎಳೆಯ ಮಕ್ಕಳ ಬಾಯಿ ಚಾಲಾಕುತನ, ವ್ಯಾಪಾರ ಶೈಲಿ, ತೊಡಗಿಸಿಕೊಳ್ಳುವಿಕೆ ಅಸಾಧಾರಣವಾಗಿದ್ದವು. ಇದೆಲ್ಲದಕ್ಕು ಬೆಂಬಲವಾಗಿ ಶಾಲಾ ಶಿಕ್ಷಕ ವೃಂದದವರ ಮಾರ್ಗದರ್ಶನ ಬಾಲ ವ್ಯಾಪಾರಿಗಳ ಹುರುಪನ್ನು ಇನ್ನಷ್ಟೂ ಹೆಚ್ಚಿಸುತ್ತಿದ್ದದ್ದು ಸುಳ್ಳಲ್ಲ. ಕಾಣಿಯೂರು ಹಾಗು ಬಾಳಿಲ ಹೈಸ್ಕೂಲ್ ವಿದ್ಯಾರ್ಥಿಗಳು, ಹೆತ್ತವರು, ಎಸ್ಡಿಎಂಸಿ ಸದಸ್ಯರು ಮತ್ತು ಸಮಸ್ತ ಊರವರು ಸಂತೆ ಮೇಳದ ಗಿರಾಕಿಗಳಾಗಿದ್ದರು.
ಸಂತೆ ಮೇಳವೇ ಒಂದು ವಿಶೇಷ. ಆ ಸಂತೆ ಮೇಳದಲ್ಲಿಯೂ ಹಲವಾರು ಸೋಜಿಗವಾದ ವೈಶಿಷ್ಠ್ಯತೆಯಿದೆ. ಪ್ರತಿ ಭಾಗದಲ್ಲಿಯೂ ವಾರದ ಸಂತೆ ಇರುತ್ತದೆ. ಪ್ರತಿಯೊಂದು ವಸ್ತುಗಳಿಗೆ, ತರಕಾರಿಗಳಿಗೆ ವಿಪರೀತ ಬೆಲೆ. ಕೆಲವು ಬಾರಿ ಕೊಳೆತು ಹೋದ ತರಕಾರಿಗಳು, ಹಾನಿಗೊಳಗಾದ ವಸ್ತುಗಳು ದುರಾದೃಷ್ಠರಾದ ಗ್ರಾಹಕರಿಗೆ ಸಿಗುತ್ತದೆ.
ಆದರೆ ಮಕ್ಕಳ ಸಂತೆಯಲ್ಲಿ ಸ್ವತಃ ಅವರೇ ತಯಾರಿಸಿದ ತಿನಿಸುಗಳು, ಮನೆಯಲ್ಲಿ ಬೆಳೆದ ಫ್ರೆಶ್ ತರಕಾರಿಗಳು, ಕರಕುಶಲ ವಸ್ತುಗಳು ಮಾರಾಟಕ್ಕಿದ್ದು ವಿಶೇಷವಾಗಿತ್ತು. ಪುಟ್ಟ ಕೈಗಳಿಂದ ಸಿದ್ದಪಡಿಸಿದ ತೆಂಗಿನ ಗರಿಯ ಹಿಡಿಸೂಡಿ, ವೀಳ್ಯದ ಎಲೆಯ ಕಟ್ಟುಗಳಿಗೆ, ಭಾರಿ ಬೇಡಿಕೆಯಿದ್ದವು. ಸಂತೆಯಲ್ಲಿ 22 ಮಳಿಗೆಗಳಿದ್ದು, 120ಕ್ಕಿಂತ ಅಧಿಕ ವಿದ್ಯಾರ್ಥಿ ವ್ಯಾರಿಗಳು ಭಾಗವಹಿಸಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
previous post