ಯಾವುದೇ ಪೂಜೆಗಿಂತಲೂ ಮಾನವೀಯತೆ ಎಂಬ ದೊಡ್ಡ ಪೂಜೆ ಇನ್ನೊಂದಿಲ್ಲ. ಇಲ್ಲೊಬ್ಬ ಯುವಕ ಅದನ್ನು ಸಾಬೀತು ಮಾಡಿದ್ದಾನೆ. ಬಾಲಕಿಯ ಜೀವ ಉಳಿಸಲು ರಂಜಾನ್ ಉಪವಾಸ ತ್ಯಜಿಸಿ ರಕ್ತದಾನ ಮಾಡಿದ್ದಾನೆ.
ರಕ್ತಕ್ಕೆ ಸಂಬಂಧಿಸಿದ ಥಲಸ್ಸೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ರಕ್ತದ ಅಗತ್ಯವಿತ್ತು. ಈ ಬಾಲಕಿಯ ಕುಟುಂಬ ಭಾರತ- ಬಾಂಗ್ಲಾದೇಶ ಗಡಿಯಲ್ಲಿ ವಾಸಿಸುತ್ತಿದ್ದರು. ಈ ಪ್ರದೇಶ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವ ಪಡೆದ ಊರಿದು. ಕಾರಣ ಹಲವಾರು. ಇಲ್ಲಿನ ಮೀನು ಮಾರಾಟಗಾರ ಗೌತಮ್ ದಾಸ್ ಅವರ ಮಗಳು ರಾಖಿಗೆ ಕಳೆದ 3 ವರ್ಷಗಳಿಂದ ಥಲಸ್ಸೆಮಿಯಾ ಸಮಸ್ಯೆ ಇದೆ. ಹೀಗಾಗಿ ರಕ್ತದ ಅವಶ್ಯಕತೆ ಇರುತ್ತದೆ. ಅದೂ
A+ve ರಕ್ತದ ತುರ್ತು ಅವಶ್ಯಕತೆ ಇತ್ತು. ಆ ಸಂದರ್ಭದಲ್ಲಿ ಅತೀ ತುರ್ತು ಅದಾಗಿತ್ತು. ಹೀಗಾಗಿ ಒಸ್ಮಾನ್ ಗನಿ ಶೇಖ್ ಎಂಬ ಯುವಕ ರಕ್ತದಾನ ಮಾಡಲು ರಂಜಾನ್ ಉಪವಾಸವನ್ನು ತ್ಯಜಿಸಿ ರಕ್ತದಾನ ಮಾಡಿದ. ಒಸ್ಮಾನ್ ಗನಿ ಶೇಖ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಬ್ಲಡ್ ಡೋನರ್ ಎಂದು ಗುರುತಿಸಿಕೊಂಡಿದ್ದ. ಇದನ್ನು ನೋಡಿದ ಬಾಲಕಿಯ ತಂದೆ ಗನಿಗೆ ಕರೆ ಮಾಡಿದ್ದಾರೆ. ಕರೆ ಬಂದ ತಕ್ಷಣವೇ ನಾನು ಉಪವಾಸ ಅಂತ್ಯಗೊಳಿಸಿ ಬಾಲಕಿಗೆ ರಕ್ತ ನೀಡಲು ನಿರ್ಧರಿಸಿದೆ. 2016 ರಲ್ಲಿ ನಾನು ಸಂಬಂಧಿಕರೊಬ್ಬರಿಗೆ ರಕ್ತ ಕೊಡಿಸುವುದಕ್ಕೆ ಸಮಸ್ಯೆ ಎದುರಿಸಿದ್ದೆ. ಆಗಿನಿಂದ ನಾನು ರಕ್ತದಾನ ಮಾಡುವುದಕ್ಕೆ ನಿರ್ಧರಿಸಿದೆ ಎಂದು ಸ್ನಾತಕೋತ್ತರ ಪದವೀಧರ ಗನಿ ಸುದ್ದಿ ಸಂಸ್ಥೆಗೆ ಹೇಳಿರುವುದು ವರದಿಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Advertisement