ಮಳೆ ಬರುವ ಸೂಚನೆ ಸಿಕ್ಕಿದೆ. ಆಗಿ ಹೋಗಿರುವ ಎಲ್ಲಾ ಘಟನೆಗಳನ್ನೂ ಮರೆತು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ಕೊಡಗಿನ ಕೃಷಿಕರು. ಮತ್ತೆ ಕೃಷಿ ಭೂಮಿ ಸಮೃದ್ಧ ಮಡುವ ಸಿದ್ಧತೆಯಲ್ಲಿದ್ದಾರೆ. ಈ ಬಾರಿ ಫಸಲು ಹೇಗೆ ತೆಗೆಯುವುದು ಎಂಬುದರ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ.
ಕೊಡಗಿನಲ್ಲಿ ಕಳೆದ ವರ್ಷದ ಮಳೆ ಭೀಕರ ಅನಾಹುತ ಸೃಷ್ಟಿ ಮಾಡಿತ್ತು. ಕೊಡಗಿನ ಇತಿಹಾಸದಲ್ಲೇ ಅಂತಹದೊಂದು ಮಳೆ ಸುರಿದಿರಲಿಲ್ಲ. ಚಳಿಯಾದರೂ ಇದ್ದಿತ್ತು, ಮಳೆ ಮಾತ್ರಾ ಹಾಗೆ ಸುರಿದಿರಲಿಲ್ಲ ಎಂದು ಮಡಿಕೇರಿಯ ರಾಮಚಂದ್ರ, ನೆನಪಿಸುತ್ತಾ ಕಳೆದ ಬಾರಿಯ ಮುಂಗಾರು ಮಳೆ ಇಡೀ ಕೊಡಗನ್ನು ಅಲ್ಲೋಲ ಕಲ್ಲೋಲ ಮಾಡಿದ್ದಂತು ನಿಜ. ಮೊದಲೆಲ್ಲ ಮುಂಗಾರು ಆಗಮನವನ್ನು ಸಂಭ್ರಮಿಸುತ್ತಿದ್ದ ಕೊಡಗಿನ ಜನ ಈ ಬಾರಿ ಏನು ಅನಾಹುತದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಈ ಬಾರಿ ಭಯ ಇದೆ ನಿಜ. ಹಾಗೆಂದು ಕೃಷಿ ಮಾಡುವ ಕಾಯಕದಲ್ಲಿ ಭರವಸೆಯೊಂದಿಗೆ ತೊಡಗಿದ್ದಾರೆ.
ಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರು ಮುಂಗಾರು ಆರಂಭದ ಈ ದಿನಗಳಲ್ಲಿ ತೋಟ, ಗದ್ದೆ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬೇಕಾಗಿದೆ. ಈ ಕೆಲಸಗಳಲ್ಲಿ ಬೆಳೆಗಾರರು ತೊಡಗಿಸಿಕೊಂಡಿದ್ದಾರೆ.ಈಗಾಗಲೇ ಮಳೆ ಸುರಿದು ಭೂಮಿ ತೇವಗೊಂಡಿರುವುದರಿಂದ ಕಾಫಿ ತೋಟದಲ್ಲಿರುವ ಮರಗಳ ನೆರಳು ತೆಗೆಯುವ ಮರ ಕಪಾತ್ ಕೆಲಸ, ಕಾಫಿ ಗಿಡಗಳ ಕಪಾತ್, ಗೊಬ್ಬರ ಹಾಕುವುದು ಹೀಗೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.ಪಾಳು ಬಿದ್ದ ಭತ್ತದ ಗದ್ದೆಗಳು ಕೆಲವರು ಗದ್ದೆಗಳ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ರೈತರಿಗೆ ಸಹಾಯವಾಣಿ ಗ್ರಾಮ ಪಂಚಾಯತ್ ಮಟ್ಟದ ಮಳೆ ಮಾಪನ ಕೇಂದ್ರಗಳು ಹಾಗೂ ಹೋಬಳಿ ಮಟ್ಟದ ಹವಾಮಾನ ಮಾಪನ ಕೇಂದ್ರಗಳಿಂದ ಸಂಗ್ರಹಿಸಲ್ಪಟ್ಟ ಹವಾಮಾನ ಸಂಬಂಧಿತ ಮಾಹಿತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಗಣಕೀಕೃತ ಮಾದರಿಗಳ ಮೂಲಕ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಹವಾಮಾನ ಮುನ್ಸೂಚನೆಯನ್ನು ನೇರವಾಗಿ ತಲುಪಿಸಲು ವರುಣ ಮಿತ್ರ 9243345433(24×7) ಸಹಾಯವಾಣಿ ತೆರೆಯಲಾಗಿದೆ. ಜಿಲ್ಲೆಯ ರೈತರು ಈ ವರುಣ ಮಿತ್ರ ಸಹಾಯವಾಣಿಯಿಂದ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ತಮ್ಮ ಕೃಷಿ ಚಟುವಟಿಕೆ ರೂಪಿಸಿಕೊಳ್ಳುವುದರ ಮೂಲಕ ಹವಾಮಾನ ವೈಪರೀತ್ಯದಿಂದ ಆಗಬಹುದಾದ ಬೆಳೆ ನಾಶವನ್ನು ತಡೆಗಟ್ಟಲು ಹಾಗೂ ಸಮರ್ಪಕ ಬೆಳೆ ನಿರ್ವಹಣೆಯ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ.

( ಇಂಟರ್ನೆಟ್ ಚಿತ್ರ )