ಸುಳ್ಯ : ಸಿ.ಎಫ್.ಸಿ ಜಟ್ಟಿಪಳ್ಳದ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ ದೀಪಾವಳಿ ಮತ್ತು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಕೈಗೊಳ್ಳುತ್ತಿರುವ ಸಂಘಟನೆಯ ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಭಾತಿಷ ಬೀಳ್ಕೊಡುವ ಕಾರ್ಯಕ್ರಮ ಜರುಗಿತು.
ಆರ್ ಟಿ ಎಸ್ ಸೇವಾ ಕೇಂದ್ರ ಮ್ಹಾಲಕ ರಶೀದ್ ಜಟ್ಟಿಪಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಸಿ.ಎಫ್ .ಸಿ ಮಾಜಿ ಅಧ್ಯಕ್ಷ ಸಂದೇಶ್ ಕುಮಾರ್, ಗ್ರೀನ್ ಬಾಯ್ಸ್ ಅಧ್ಯಕ್ಷ ಶಿಹಾಬ್ ಷಾ,ಸ್ವಾಗತ್ ಗೇಮ್ಸ್ ಕ್ಲಬ್ ಅಧ್ಯಕ್ಷ ರಜಾಕ್ ಕೆ ಎಂ,ಸಿ ಎಫ್ ಸಿ ಸದಸ್ಯರಾದ ಆಶೀರ್,ಅಬ್ದುಲ್ ರಹಿಮಾನ್ ಕೆ.ಎ ,ರಿಯಾಜ್.ಸಿ.ಎ, ಸತ್ಯನಾರಯಣ, ಸಾದಿಕ್ ಎಸ್ ಎ ,ಪವಾಜ್ ಎನ್ ಎ, ಇಮ್ರಾನ್ ಬಾರಿಕ್ಕಾಡ್,ಸುಲೈಮಾನ್ , ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ನಾಸಿರ್ ಸಿ.ಎ ಸ್ವಾಗತಿಸಿ ಮೊಯಿದೀನ್ ಅಜ್ಮೀರಿಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.