ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗುತ್ತಿಗಾರು ಗ್ರಾಪಂನ ಒಂದನೇ ವಾರ್ಡ್ ನಿಂದ ಎಲ್ಲಾ ಸ್ಥಾನಗಳಿಗೆ ನಾಗರಿಕರ ತಂಡವು “ಗ್ರಾಮಭಾರತ” ಹೆಸರಿನಲ್ಲಿ ಸ್ಫರ್ಧೆಗೆ ಇಳಿದಿದೆ.
ಊರಿನ ರಸ್ತೆ, ಕುಡಿಯುವ ನೀರು ಹಾಗೂ ಊರಿನ ಮೂಲಭೂತ ವ್ಯವಸ್ಥೆಗಳ ಸುಧಾರಣೆ, ರಸ್ತೆ , ಸೇತುವೆ, ಸ್ವಚ್ಛ ಭಾರತದ ಸಮರ್ಪಕ ಅನುಷ್ಟಾನ, ಸೇರಿದಂತೆ ವಿವಿಧ ಉದ್ದೇಶಗಳೊಂದಿಗೆ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳನ್ನು ತಡೆಯಲು ಸ್ಫರ್ಧೆಗೆ ಇಳಿದಿದೆ. ಈಗಾಗಲೇ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಗುತ್ತಿಗಾರು ಒಂದನೇ ವಾರ್ಡ್ ನಲ್ಲಿ ಸಾಮಾನ್ಯ ಮಹಿಳೆ , ಅನುಸೂಚಿತ ಜಾತಿ ಪುರುಷ, ಹಿಂದುಳಿದ ವರ್ಗ ಎ ಹಾಗೂ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲು ಸ್ಥಾನ ಘೋಷಣೆಯಾಗಿತ್ತು. ಇದೀಗ ಗ್ರಾಪಂ ಮಾಜಿ ಸದಸ್ಯೆ ಎಂ ಕೆ ಶಾರದಾ ಮುತ್ಲಾಜೆ, ವಸಂತ ಮೊಗ್ರ, ಭರತ್ ಕೆ ವಿ ಕಮಿಲ, ಲತಾ ಕುಮಾರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
