ಸುಳ್ಯ: ನಿರಂತರ ಆರು ಬಾರಿ ಶಾಸಕರಾಗಿ ಆಯ್ಕೆಯಾದರೂ ಶುದ್ಧ ಚಾರಿತ್ಯದ ಪ್ರಾಮಾಣಿಕ ರಾಜಕಾರಣಿ ಶೈಲಿಯನ್ನು ರೂಢಿಸಿಕೊಂಡು , ಕೈ , ಬಾಯಿ ಶುದ್ಧ ಇರಿಸಿಕೊಂಡಿರುವ ಅಪರೂಪದ ವ್ಯಕ್ತಿ ಸುಳ್ಯದ ಬಂಗಾರ ಎಂದೇ ಪ್ರಸಿದ್ಧರಾದ ಎಸ್.ಅಂಗಾರ. ಸಜ್ಜನ ರಾಜಕಾರಣಿ ಎಂದು ವಿರೋಧ ಪಕ್ಷದವರಿಂದಲೂ ಹೊಗಳಿಸಿಕೊಂಡಿರುವ ಅಂಗಾರ ಆರು ಭಾರಿ ಸುಳ್ಯವನ್ನು ವಿಧಾನ ಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಮೊದಲ ಬಾರಿಗೆ ಸೋಲನುಭವಿಸಿದರೂ , ಮತ್ತಷ್ಟು ಹುರುಪಿನಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಂಗಾರರು 1994 ರ ಬಳಿಕ ಇಂದಿನ ತನಕ ನಡೆದ ಎಲ್ಲಾ ಚುನಾವಣೆಗಳಲ್ಲಿ ನಿರಂತರ ಗೆಲುವು ಸಾಧಿಸಿ ಆರನೇ ಅವಧಿಗೆ ವಿಧಾನ ಸಭೆ ಪ್ರವೇಶಿಸಿದರು. ಶಾಸಕನ ಮಿತಿಯಲ್ಲಿ , ಲಭ್ಯ ಅನುದಾನಗಳ ಬಳಕೆಯೋಂದಿಗೆ ಎಷ್ಟು ಸಾಧ್ಯವೋ ಸುಳ್ಯವನ್ನು ಅಸ್ಟು ಶಾಸಕರಾಗಿ ಪ್ರತಿನಿಧಿಸುತ್ತಿರುವುದು ಇವರ ಜನಪ್ರಿಯತೆಗೆ ಸಾಕ್ಷಿ . 27 ವರ್ಷಗಳಿಂದ ವಿಧಾನ ಸಭೆಯಲ್ಲಿ ಪ್ರತಿನಿಧಿಸುತ್ತಿರುವ ಜನಪ್ರಿಯ ಶಾಸಕ ಎಸ್ . ಅಂಗಾರರವರು . ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆಯ ಚನಿಯ ಮತ್ತು ಶ್ರೀಮತಿ ಹುಕ್ರುರವರ ಮಗನಾಗಿ 01-07-1964 ರಂದು ಅಂಗಾರರ ಜನನ. ಬಡತನದಲ್ಲಿಯೇ ಬಾಲ್ಯ ಕಳೆದರು . ಅಪ್ಪ , ಅಮ್ಮ ಕೂಲಿ ಕೆಲಸ ಮಾಡಿ ಮಗನನ್ನು ಪ್ರೌಢ ಶಿಕ್ಷಣದವರೆಗೆ ಓದಿಸಿದರು . ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಂಗಾರನ್ನು ಸಾಮಾಜಿಕ ಕ್ಷೇತ್ರಕ್ಕೆ ಕರೆ

ತರುವ ಮೂಲಕ ಸುಳ್ಯದ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಲಾಗಿತ್ತು. ಆ ದಿನಗಳಲ್ಲಿ ಅಂಗಾರರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಪರ್ಕ ಹೊಂದುವ ಅವಕಾಶ .ತಳೂರು ಚಂದ್ರಶೇಖರರ ಮಾರ್ಗದರ್ಶನದಲ್ಲಿ ಸಂಘದ ದೈನಂದಿನ ಶಾಖೆಗಳ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು . ಸಂಘದ ನಿರಂತರ ಸಂಪರ್ಕ ಅಂಗಾರರಲ್ಲಿ ಆತ್ಮವಿಶ್ವಾಸ , ಧೈಯ , ಆದರ್ಶಗಳನ್ನು ತುಂಬಿ ಇವರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ನೀಡಿತು . ಮುಂದೆ ಸಂಘದ ಶಿಕ್ಷಾ ವರ್ಗ ತರಬೇತಿಯನ್ನು ಪಡೆದುಕೊಂಡು ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವಾ ಜೀವನ ಆರಂಭಿಸಿದರು. 1979 ರಿಂದ ಹಿರಿಯರ ಆದೇಶದಂತೆ ಸಂಘ ಪರಿವಾರದ ರಾಜಕೀಯ ಶಾಖೆಯಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ನಿಯುಕ್ತರಾದರು . ಮುಂದೆ ಪಕ್ಷದ ತಾಲೂಕು ಕಾರ್ಯದರ್ಶಿಯಾಗಿ , ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾಗಿ , ರಾಜ್ಯ ಸಮಿತಿ ಸದಸ್ಯರಾಗಿ ಅತ್ಯಂತ ದಕ್ಷತೆ ಹಾಗೂ ಕ್ರಿಯಾ ಶೀಲತೆಯಿಂದ ಕಾರ್ಯ ನಿರ್ವಹಿಸಿದರು .ಇವರ ಜನಪರ ಕಾಳಜಿ , ಕಾರ್ಯಕ್ಷಮತೆಯನ್ನು ಗಮನಿಸಿ 1989 ರಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗಿತ್ತು. ಶಾಕರಾಗಿ ಅಂಗಾರರು ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ.