ಸುಳ್ಯ: ಶಾಸಕ ಎಸ್.ಅಂಗಾರ ಅವರು ಶಾಸಕರಾಗಿ ಎರಡೂವರೆ ದಶಕದದಲ್ಲಿ ಸುಳ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನೇ ಸೃಷ್ಠಿಸಿದ್ದಾರೆ. ಇದೀಗ ಅಂಗಾರರು ಸಚಿವರಾಗುವ ಮೂಲಕ ಸುಳ್ಯಕ್ಕೆ ಹೊಸ ಅಭಿವೃದ್ಧಿ ಶಕೆಯ ನಿರೀಕ್ಷೆ ಹುಟ್ಟಿಸಿದೆ. ಸುಳ್ಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ,ಬಸ್ ಡಿಪೊ ನಿರ್ಮಾಣಕ್ಕಾಗಿ ಅನುದಾನ , ಸುಸಜ್ಜಿತ ಅಗ್ನಿ ಶಾಮಕ ಠಾಣೆ , ತಾಲೂಕಿನಾದ್ಯಂತ ಹಲವು ವಿದ್ಯಾರ್ಥಿನಿಲಯಗಳು , ಸುಳ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ,ಮೊರಾರ್ಜಿ ವಸತಿ ಶಾಲೆ , ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಅನುದಾನ , ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳದ ಸಂಘಟನೆ , ತಾಲೂಕು ಕೇಂದ್ರದಲ್ಲಿ 2 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ , ಸುಳ್ಯದ ಸಮುದಾಯ ಆರೋಗ್ಯ ಕೇಂದ್ರವನ್ನು 4.5 ಕೋಟಿ ರೂ . ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಕೆ , ಕ್ಷೇತ್ರದ ಸಾಕಷ್ಟು ರೂಟ್ಗಳಲ್ಲಿ ವ್ಯವಸ್ಥಿತ ಬಸ್ ಸಂಚಾರ , ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ , ಸಭಾಭವನ ಕಟ್ಟಡ ನಿರ್ಮಾಣ , ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ

ಆರೋಗ್ಯ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಾಣ ,ಲೋಕೋಪಯೋಗಿ ಇಲಾಖೆ ಉಪವಿಭಾಗ ಆರಂಭ ಗ್ರಾಮೀಣ ರಸ್ತೆಗಳ ಅಭಿವೃದ್ಧಿ , ಜಾಲ್ಲೂರು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ , ಕ್ಯೂಲದಲ್ಲಿ ಪಶು ವೈದ್ಯ ಕಾಲೇಜಿಗೆ ಮಂಜೂರಾತಿ , ಕ್ಷೇತ್ರದ ಅಂಗನವಾಡಿಗಳಿಗೆ ಸ್ವಂತ ಕಟ್ಟಡ , ಕುಮಾರಧಾರಾ , ಹೊಸ್ಮಠ , ಶಾಂತಿಮೊಗೇರು , ಮುರೂರುಗಳಲ್ಲಿ ಬೃಹತ್ ಸೇತುವೆಗಳ ರಚನೆ , ಗ್ರಾಮೀಣ ವಿದ್ಯುದ್ದೀಕರಣ , ಕ್ಷೇತ್ರದಾದ್ಯಂತ ಕಿಂಡಿ ಅಣೆಕಟ್ಟುಗಳ ನಿರ್ಮಾಣ , ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ಹೀಗೆ ಅಭಿವೃದ್ಧಿ ಕಾಮಗಾರಿಗಳು ಅಂಗಾರರವರ ಶಾಸಕಾವಧಿಯಲ್ಲಿ ಕಾರ್ಯರೂಪಕ್ಕೆ ಬಂದು ಸುಳ್ಯದ ಭೌತಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ . ಅನಗತ್ಯ ವೈಯಕ್ತಿಕ ವಶೀಲಿ ಹಾಗೂ ಪ್ರಭಾವ ವರ್ಗಾವರ್ಗಿ ರಾಜಕೀಯದಿಂದ ದೂರ ಉಳಿದವರು ಅಂಗಾರರು . ಇವರ ಸಹನೆ ,ತಾಳ್ಮೆ ಇವರ ಶ್ರೀರಕ್ಷೆಯಾಗಿ ಯಶಸ್ಸಿಗೆ ದಾರಿ ಮಾಡಿಕೊಟ್ಟಿದೆ .ಆರು ಭಾರಿ ಆಯ್ಕೆಯಾದರೂ , ಪಕ್ಷ ಅಧಿಕಾರದಲ್ಲಿದ್ದಾಗಲೂ ಮಂತ್ರಿ ಸ್ಥಾನಕ್ಕಾಗಿ ದುಂಬಾಲುಬಿದ್ದವರಲ್ಲ . ಪತ್ನಿ ವೇದಾವತಿ , ಪುತ್ರ ಗೌತಮ್ , ಪುತ್ರಿ ಪೂಜಾಶ್ರೀಯವರೊಂದಿಗೆ ಸುಸಂಸ್ಕೃತ ಸಾಂಸಾರಿಕ ಜೀವನ ನಡೆಸುತ್ತಿರುವ ಅಂಗಾರರು ಇಂದಿನ ಯುವ ಸಮುದಾಯಕ್ಕೆ ಆದರ್ಶ ಪ್ರಾಯರಾಗಿದ್ದಾರೆ .