ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಅಜ್ಜಿ ದೈವದ ನೇಮ ಗುರುವಾರ ಬೆಳಗ್ಗೆ ನಡೆಯಿತು. ಮಂಗಳವಾರ ದೈವಗಳ ಭಂಡಾರ ಬಂದ ಬಳಿಕ ಶ್ರೀ ಉಳ್ಳಾಕುಲ ದೈವ, ಕುಮಾರ ದೈವ ಸೇರಿದಂತೆ ವಿವಿಧ ದೈವಗಳ ನೇಮ ನಡೆದು ಗುರುವಾರ ಬೆಳಗ್ಗೆ ಅಜ್ಜಿ ದೈವ ಅಥವಾ ಕನ್ನಡ ದೇವತೆ ದೈವದ ನೇಮ ನಡೆಯಿತು.ಸಾವಿರಾರು ಭಕ್ತಾದಿಗಳು ಭಾಗವಹಿಸಿದರು.
Advertisement

ಗುರುವಾರ ಬೆಳಗ್ಗೆ ಸಚಿವ ಎಸ್.ಅಂಗಾರ ಅವರು ದೈವಸ್ಥಾನಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಬೆಂಗಳೂರಿಗೆ ತೆರಳಿದರು.

Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement