ಗುತ್ತಿಗಾರು: ಬಿ. ಎಂ. ಎಸ್.ಆಟೋ ಚಾಲಕರ ಘಟಕ, ಮತ್ತು ಪ್ರದೀಪ್ ಕೊಲ್ಯ ಅಭಿಮಾನಿಗಳ ವತಿಯಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಒಮನ ಅವರನ್ನು ಗೌರವಿಸಲಾಯಿತು.ಗುತ್ತಿಗಾರು ರಿಕ್ಷಾ ಚಾಲಕರು ಮತ್ತು
ನೂತನ ಎಸ್ ಐ ಪ್ರದೀಪ್ ಕೊಲ್ಯ ಅಭಿಮಾನಿಗಳು ಗುತ್ತಿಗಾರು ರಿಕ್ಷಾ ನಿಲ್ದಾಣ ಬಳಿ ಇಲಾಖೆ ವತಿಯಿಂದ ಹಾಕಿದ್ದ ಬ್ಯಾರಿಕೇಡ್ ಗೆ ಬಣ್ಣ ಬಳಿಯುವುದು ಹಾಗೂ ದುರಸ್ಥಿ, ಸ್ಟಿಕ್ಕರ್ ನೀಡಿದ್ದರು. ಇದಕ್ಕಾಗಿ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ಅವರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ
ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ವಿಜೇತರಾದ ಠಾಣಾಧಿಕಾರಿ ಓಮನ ಅವರನ್ನು ರಿಕ್ಷಾ ಚಾಲಕರು ಗೌರವಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಉದಯ ಕುಮಾರ್ ಹಾಲೆಮಜಲು, ಪದಾಧಿಕಾರಿಗಳಾದ ಪೇರಪ್ಪ ಗೌಡ, ಗಿರೀಶ್ ಪಾರೆಪ್ಪಾಡಿ, ವಸಂತ ಚತ್ರಪ್ಪಾಡಿ , ರಾಜೇಶ್ ಉತ್ರಂಬೆ, ಪಂಚಾಯತ್ ಸದಸ್ಯ, ಜಗದೀಶ್ ಬಾಕಿಲ, ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಉದ್ಯಮಿ ವಿನ್ಯಾಸ್ ಕೊಚ್ಚಿ ಮತ್ತು ಸಂಘದ ಸದಸ್ಯರು ಹಾಜರಿದ್ದರು, ಸಂಘಟನಾ ಕಾರ್ಯದರ್ಶಿ, ಪ್ರದೀಪ್ ಅಭಿಮಾನಿ ಬಳಗದ ಪ್ರಮುಖ್ ಚಂದ್ರಶೇಖರ್ ಕಡೋಡಿ ಕಾರ್ಯಕ್ರಮ ನಿರೂಪಿಸಿದರು.