ಗುತ್ತಿಗಾರು: ಕೊರೋನಾ ವಿರುದ್ಧ ಲಸಿಕೆ ವಿತರಣೆ ಪ್ರಚಾರಕ್ಕೆ ಬಿ. ಎಂ. ಎಸ್. ಆಟೋ ಘಟಕದ ವತಿಯಿಂದ ಉಚಿತ ಸೇವೆಗೆ ಡಾ.ಚೈತ್ರ ಬಾನು ಅವರು ಚಾಲನೆ ನೀಡಿದರು. ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಗುತ್ತಿಗಾರು ಇದರ
ಸಹಯೋಗದಲ್ಲಿ ನಡೆಯುತ್ತಿರುವ ಕೊರೋನಾ ವಿರುದ್ಧ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ , ಲಸಿಕೆ ಮತ್ತು ಆರೋಗ್ಯ ಕುರಿತು ಡಾ.ಚೈತ್ರ ಬಾನು,ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಆಟೋ ಚಾಲಕರ ಕಾರ್ಯಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ಲತಾ ರವಿಕುಮಾರ್, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು , ಬಿ ಎಂ ಎಸ್ ಆಟೋ ಘಟಕ ಅಧ್ಯಕ್ಷ ಉದಯ್ ಹಾಲೆಮಜಲು, ಗೌರವ ಅಧ್ಯಕ್ಷ ಮೋಹನ್, ವಸಂತ ಚತ್ರಪ್ಪಾಡಿ,ಲೋಹಿತ್ ಕೊರತ್ತೆಡ್ಕ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಗುತ್ತಿಗಾರು ಸರಕಾರಿ ಆಸ್ಪತ್ರೆ ವ್ಯಾಪ್ತಿಯ ಪ್ರದೇಶಗಳಲ್ಲಿ ಧ್ವನಿ ವರ್ಧಕ ಪ್ರಚಾರವನ್ನು ರಿಕ್ಷಾ ಯೂನಿಯನ್ ಉಚಿತವಾಗಿ ಮಾಡಲಿದ್ದಾರೆ. ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಡೋಡಿ ಕಾರ್ಯಕ್ರಮ ನಿರೂಪಿಸಿದರು.