ಸುಳ್ಯ : ಅಲ್- ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ನೂತನ ಕಾರ್ಯಾಲಯದ ಉದ್ಘಾಟನೆ ನೆರವೇರಿತು. ಅರಂಬೂರಿನ
ಬದರ್ ಜುಮಾ ಮಸೀದಿಯ ವಾಣಿಜ್ಯ ಸಂಕೀರ್ಣದಲ್ಲಿ ಅಲ್ ಅಮೀನ್ ಯೂತ್ ಫೆಡರೇಶನ್ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಿತು. ಕಚೇರಿ ಉದ್ಘಾಟನೆಯನ್ನು ಹಾಜಿ ಅಬ್ದುಲ್ ರಹಿಮಾನ್ ನೆರವೇರಿಸಿದರು. ಮಸೀದಿ ಖತೀಬರಾದ ಬಹು| ಮೂಸ ಹಾರಿಸ್ ಮಖ್ದೂಮಿ ಕುಕ್ಕಾಜೆ ಉಸ್ತಾದರು ದುವಾಃ ನೇತೃತ್ವ ನೀಡಿ ಸಂಘಟನೆಗೆ ಶುಭಾಶಯ ತಿಳಿಸಿದರು. ಬದ್ರಿಯಾ
ಜುಮಾ ಮಸೀದಿ ಕಾರ್ಯದರ್ಶಿ ಅಕ್ಬರಲಿ ಮಾತನಾಡಿ ಎ.ವೈ.ಎಫ್ ನಡೆಸಿದ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ
ಆಸಿಫ್ ಪನ್ನೆ, “ಸಂಘಟನೆಯಿಂದ ಸಮಾಜದಲ್ಲಿ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳು ನಡೆಸಲು ಸಂಘಟನೆಯು ನಿರ್ಧರಿಸಿದ್ದು ಇದಕ್ಕೆ ಸರ್ವರ ಸಹಕಾರ ಅಗತ್ಯವಿದೆ” ಎಂದು ನುಡಿದರು. ಈ ಸಂದರ್ಭದಲ್ಲಿ
ಅಹಮದ್ ಹಾಜಿ ಪಾರೆ, ಅಹಮದ್ ಹಾಜಿ ಸುಪ್ರಿಮ್, ಉಮ್ಮರ್ ಹಾಜಿ ಬುಶ್ರಾ, ಖಾದರ್ ಹಾಜಿ ಅಝಾದ್, ಕಬೀರ್ ಮಾಂಬ್ಲಿ, ಹನೀಫ ಮಾಂಬ್ಲಿ, ಕಬೀರ್ ಪನ್ನೆ, ಫಯಾಝ್ ಶೇಖ್ ಹಾಗೂ ಸ್ಥಳೀಯರು, ಊರಿನ ಯುವಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ನಿಝಾರ್ ಶೈನ್ ಸ್ವಾಗತಿಸಿ, ಮುನೀರ್ ಶೈನ್ ವಂದಿಸಿದರು.