ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ಬಿ.ಜೆ.ಪಿ. ಮಹಿಳಾ ಮೋರ್ಚಾ ವತಿಯಿಂದ ಗ್ರಾಮದ ಹಿರಿಯ ಕಾರ್ಯಕರ್ತೆ ರಮಾ ಅನಂತ ನಲ್ಲೂರಾಯ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.ರಾಷ್ಟ್ರೀಯ
ಕೈಮಗ್ಗ ದಿನದ ಅಂಗವಾಗಿ ಕೈಮಗ್ಗದ ಪರಂಪರೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯತೆಯಿಂದ ಜಾಗತೀಯತೆ(local to global) ಚಿಂತನೆಯಂತೆ; ತುರ್ತುಪರಿಸ್ಥಿತಿ (1975-77) ಹೋರಾಟ ಸಂತ್ರಸ್ತರ ಗ್ರಾಮದ ಮನೆಯನ್ನು ಗುರುತಿಸಿ, ಹಿರಿಯ ಕಾರ್ಯಕರ್ತೆಯನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರಾದ ದಿನೇಶ ಸಂಪ್ಯಾಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸವಿತಾ, ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ತ್ರಿವೇಣೀ ದಾಮ್ಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಶೋಭಾ ನಲ್ಲೂರಾಯ, ವಿಶೇಷ ಆಹ್ವಾನಿತರಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ ವಿ. ಭಟ್, ಮಹಿಳಾ ಮೋರ್ಚಾ ಕಾರ್ಯಕರ್ತೆಯರಾದ ಸುಭಾಷಿಣಿ ಶಿವರಾಂ, ಆಶಾ ವಿ. ಶೆಣೈ ಮತ್ತು ಮನೆಯ ಸದಸ್ಯರು ಉಪಸ್ಥಿತರಿದ್ದರು.