ಸುಳ್ಯ:ಮಿಸೆಸ್ ಇಂಡಿಯಾ ಕರ್ನಾಟಕದ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ 2021 -ದಕ್ಷಿಣ ಕನ್ನಡ ವಿನ್ನರ್ ಮತ್ತು ಮಿಸೆಸ್ ಇಂಡಿಯಾ ಕರ್ನಾಟಕ 2021- ಕಾಂಜಿನಿಯಾಲಿಟಿ ಟೈಟಲನ್ನು ಸುಳ್ಯದ ಪೂರ್ಣಿಮಾ ಕೃಷ್ಣರಾಜ್ ಅವರು ಪಡೆದುಕೊಂಡಿದ್ದಾರೆ. ಆ ಮೂಲಕ ‘ವಿಕ ಜೋಡಿ ತಾರೆ’ಯ ಮುಕುಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ‘ಐ ಆಮ್ ವುಮನ್’ ಥೀಮ್ ಅಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಪೂರ್ಣಿಮಾ ರಾಜ್ಯಮಟ್ಟದಲ್ಲಿ 36

ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿದ್ದರು.ಟ್ಯಾಲೆಂಟ್ ಸುತ್ತು, ಹವಾಇನ್ ಸುತ್ತು,ಎಥ್ನಿಕ್ ಸುತ್ತು, ಪ್ರಾಪರ್ಟಿ ಸುತ್ತು, ಪೈಜಾಮ ಸುತ್ತು,ಸ್ಪೋರ್ಟ್ಸ್ ರೌಂಡ್, ಪ್ರಶ್ನೋತ್ತರ ಸುತ್ತು, ಫೋಟೋ ಶೂಟ್ ಹೀಗೆ ಹಲವು ಸುತ್ತುಗಳಲ್ಲಿ ತನ್ನ ಪ್ರತಿಭೆ ಮೆರೆದ ಪೂರ್ಣಿಮಾ ಸ್ಪರ್ಧೆಯ ಭಾಗವಾದ ಕ್ರಿಕೆಟ್ ಮತ್ತು ಲಗೋರಿ,ಕೊಕ್ಕೋ, ದೇಸಿ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದರು.ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೇಶಕಿ ಪ್ರತಿಭಾ ಸೌಂಶಿಮಠ ಇವರ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶೇಷ ಅತಿಥಿಗಳಾಗಿ ಮತ್ತು ನಿರ್ಣಾಯಕರಾಗಿ ಚಲನಚಿತ್ರ ಹಾಸ್ಯ ನಟ ಎಂ.ಎನ್.ಸುರೇಶ್, ಚಲನಚಿತ್ರ ನಟಿ ಐಶಾನಾ ಸನ್ನಪ್ಪನವರ್, ವಿದ್ವಾನ್ ಶ್ರೀಧರ್ ಸಾಗರ್ ಡಾ.ಹರೀಶ್ ಫಿನಾಲೆ ನಿರ್ಣಾಯಕರಾಗಿ ಸಹಕರಿಸಿದರೆ, ನಟ ಧನಂಜಯ್ ನಿರೂಪಿಸಿದರು ಸುಳ್ಯ ನ್ಯಾಯಾಲಯದ ಎಪಿಪಿ ಕಚೇರಿಯಲ್ಲಿ ಬೆರಳಚ್ಚುಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ

ಪೂರ್ಣಿಮಾ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್, ಗಾಯಕ ಕೃಷ್ಣರಾಜ್ ಕೇರ್ಪಳ ಅವರ ಪತ್ನಿ. ಗಾಯಕಿಯಾದ ಇವರು ನಿವೃತ್ತ ಶಿರಸ್ತೇದಾರ ವಾಮನ ಎಂ ಮತ್ತು ಶ್ಯಾಮಲಾ ಕೆ.ವಿ ಇವರ ಸೊಸೆ. ಪುತ್ತೂರು ಕೋಡಿಮರದ ತಿಮ್ಮಪ್ಪ ಹಾಗು ಇಂದಿರಾ ದಂಪತಿಯ ಪುತ್ರಿ.
ಮನಸ್ಸುಗಳ ಬೆಸೆಯುವ ಸಂಗೀತ ಜೋಡಿ ಹಕ್ಕಿಗಳು:
ಅದ್ಭುತ ಸಿರಿ ಕಂಠದ ಗಾಯಕರಾಗಿರುವ ಕೃಷ್ಣರಾಜ್ ಮತ್ತು ಪೂರ್ಣಿಮಾ ತಮ್ಮ ಸಂಗೀತದ ಮೂಲಕ ಮನಸ್ಸುಗಳನ್ನು ಬೆಸೆಯುವ ಯುವ ಜೋಡಿ. ಇಬ್ಬರು ಒಟ್ಟಿಗೆ ಹಲವಾರು ಸ್ಟೇಜ್ ಗಳಲ್ಲಿ ಸಂಗೀತ ರಸಧಾರೆ ಹರಿಸುವ ಮೂಲಕ ಸಂಗೀತಾಸಕ್ತರ ಮನಗೆದ್ದ ಮ್ಯೂಸಿಕ್ ಕಪಲ್ ಇವರು. ಲಾಕ್ ಡೌನ್ ಸಂದರ್ಭದಲ್ಲಿ ‘ಪೂರ್ಣಿಮಾ ಕೃಷ್ಣರಾಜ್’ ಫೇಸ್ ಬುಕ್ ಪೇಜ್ ಮೂಲಕ ಲೈವ್ ಆಗಿ ಸಂಗೀತ ಕಾರ್ಯಕ್ರಮ ನೀಡುತ್ತಾ ಉತ್ಸಾಹ, ಲವಲವಿಕೆ ಕುಗ್ಗಿದ ಮನಸ್ಸುಗಳಿಗೆ ನವ ಚೈತನ್ಯ ತುಂಬಿದ್ದರು.ಆಕರ್ಷಕ ನಿರೂಪಣೆ ಮತ್ತು ಮನ ಮುಟ್ಟುವ ಹಾಡುಗಳ ಮೂಲಕ ನೂರಾರು ಸಂಗೀತ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಆದುದರಿಂದಲೇ ಇವರ ಲೈವ್ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳ ಗಡಣ ಕಾತರದಿಂದ ಕಾಯುತ್ತಾ ಇರುತ್ತಾರೆ.ಈಗಾಗಲೇ 40ಕ್ಕೂ ಹೆಚ್ಚು ಫೇಸ್ ಬುಕ್ ಲೈವ್ ಮೂಲಕ ಸಾವಿರಾರು

ಮಂದಿಯ ಮನೆ-ಮನ ಮುಟ್ಟಿದ್ದಾರೆ.ಅಂದ ಹಾಗೆ ಇವರ ಮದುವೆಯ ಬಳಿಕ ಕೃಷ್ಣರಾಜ್ ಅವರೇ ಪೂರ್ಣಿಮಾ ಅವರಲ್ಲಿರುವ ಸಂಗೀತ ಪ್ರತಿಭೆಯನ್ನು ಗುರುತಿಸಿ ಪತ್ನಿಯನ್ನು ಗಾಯಕಿಯನ್ನಾಗಿ ರೂಪಿಸಿದ್ದಾರೆ.
ವಿಕ ಜೋಡಿ ತಾರೆಗಳು:
ಸುಳ್ಯದ ಯುವ ಜನತೆಯ ಸ್ಪೂರ್ತಿಯ ಜೋಡಿಯಾದ ಕೃಷ್ಣರಾಜ್ ಮತ್ತು ಪೂರ್ಣಿಮಾ ದಂಪತಿಗಳು ವಿಕ ಜೋಡಿ ತಾರೆಗಳು ಎಂದೇ ಪ್ರಸಿದ್ಧರು. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಕ ಜೋಡಿ ತಾರೆಗಳಾಗಿ ಹೊರ ಹೊಮ್ಮಿದ್ದರು. ದಾಂಪತ್ಯ ಜೀವನದಲ್ಲಿನ ಪರಸ್ಪರ ನಂಬಿಕೆ, ಹೃದಯಗಳ ಮಧ್ಯೆಯ ಪ್ರೀತಿ, ಪ್ರೇಮ ನಿತ್ಯ ಬದುಕಿನ ಅನ್ಯೂನ್ಯತೆಯ ಸಂಕೇತವಾಗಿ ಇವರು ವಿಕ ಆದರ್ಶ ಜೋಡಿ ಪಟ್ಟ ಏರಿದ್ದರು.
ಇದರ ಮದ್ಯೆ ಇವರು ಲಾಕ್ ಡೌನ್ ಅವಧಿಯಲ್ಲಿ

ಉಚಿತ ಮಾಸ್ಕ್ ಹೊಲಿದು ಹಂಚುವ, ಶಾಲೆಗಳಿಗೆ ಭೇಟಿ ಪುಸ್ತಕ ಹಂಚುವ ಕಾರ್ಯಕ್ರಮಗಳನ್ನೂ ಮಾಡುತ್ತಾರೆ. ಅತ್ಮನಿರ್ಭರ ಭಾರತ ಶಿಬಿರಗಳಲ್ಲಿ ತರಬೇತುದಾರರಾಗಿಯೂ ಭಾಗವಹಿಸಿದ್ದರು. ಇತ್ತೀಚೆಗೆ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಗೆಳೆಯರ ಮತ್ತು ಫೇಸ್ ಬುಕ್ ಅಭಿಮಾನಿಗಳ ಜೊತೆ ಆಚರಿಸಿ ಸಂಭ್ರಮಿಸಿದ್ದಾರೆ.