*ಪಿ.ಜಿ.ಎಸ್.ಎನ್.ಪ್ರಸಾದ್
ಸುಳ್ಯ: ಹೆಚ್ಚಿನ ಕಡೆಗಳಲ್ಲಿ ನಿನ್ನೆ ಹಗಲು ಮೋಡ ಬಿಸಿಲು, ಆಗಾಗ ತುಂತುರು ಮಳೆಯ ವಾತಾವರಣ. ನಿನ್ನೆ ವರುಣ, ಅರುಣ, ಮೇಘಗಳ ಕಣ್ಣಾಮುಚ್ಚಾಲೆ ಆಟ ಇದ್ದರೆ ಇಂದು ಬೆಳಗ್ಗಿನಿಂದಲೆ ವರುಣನ ಭರ್ಜರಿ ಆಟ ನಡೆಯುತಿದೆ. ಸುಳ್ಯ ಸೇರಿ ವಿವಿಧೆಡೆ ಬೆಳಗ್ಗಿನಿಂದ ಕತ್ತಲು ಕವಿದು ಭಾರೀ ಮಳೆಯಾಗುತಿದೆ. ನಿನ್ನೆ ರಾತ್ರಿಯೂ ತುಂತುರು ಮಳೆ. ಇಂದು ಬೆಳಗ್ಗೆ ಕೊನೆಗೊಂಡ 24 ಗಂಟೆಯಲ್ಲಿ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಗರಿಷ್ಟ 64, ಕಡಬ ತಾಲೂಕಿನ ಸುಬ್ರಹ್ಮಣ್ಯ 57, ಉಡುಪಿ-ಗುಂಡಿಬೈಲು 53 ಮಿ.ಮೀ. ನಷ್ಟು ಉತ್ತಮ
ಮಳೆಯಾಗಿದೆ. ಸುಳ್ಯ ತಾಲೂಕಿನ ಪೆಲತ್ತಡ್ಕ-ಪೆರುವಾಜೆ 08, ಬೆಳ್ಳಾರೆ- ಕಾವಿನಮೂಲೆ 15, ಅಯ್ಯನಕಟ್ಟೆ 14, ಬಾಳಿಲ 19, ಚೊಕ್ಕಾಡಿ 21, ಕೀಲಾರ್ಕಜೆ-ದೊಡ್ಡತೋಟ 09, ಕಲ್ಮಡ್ಕ 22, ಕಮಿಲ 18, ಹಾಲೆಮಜಲು 25, ಮೆಟ್ಟಿನಡ್ಕ 24, ಕಲ್ಲಾಜೆ 24, ಹರಿಹರ-ಮಲ್ಲಾರ 19, ಕೊಲ್ಲಮೊಗ್ರ 11, ವಾಲ್ತಾಜೆ-ಕಂದ್ರಪ್ಪಾಡಿ 20, ಮಡಪ್ಪಾಡಿ 13, ಸುಳ್ಯ ನಗರ 39, ಕಡಬ ತಾಲೂಕಿನ ಎಣ್ಮೂರು 22, ಬಳ್ಪ 30, ಕಡಬ 20, ನೆಲ್ಯಾಡಿ ಪೇಟೆ 05, ನೆಲ್ಯಾಡಿ-ನೆಕ್ರಾಜೆ 07, ಕೋಡಿಂಬಳ-ತೆಕ್ಕಡ್ಕ 35, ಪುತ್ತೂರು ತಾಲೂಕಿನ ಶಾಂತಿಗೋಡು 09, ಮುಂಡೂರು,ಆರ್ಯಾಪು-ಬಂಗಾರಡ್ಕ ತಲಾ 10, ಬಲ್ನಾಡು 05, ಕೆದಿಲ 13, ಕೊಳ್ತಿಗೆ-ಎಕ್ಕಡ್ಕ 13, ಬಂಟ್ವಾಳ ತಾಲೂಕಿನ ಮಂಚಿ 10, ಮುಡಿಪು-ಕೈರಂಗಳ 13, ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 13, ಅಡೆಂಜ-ಉರುವಾಲು 13, ಬೆಳ್ತಂಗಡಿ ನಗರದ ಅಲ್ಲಾಟ ಬಡಾವಣೆ 25, ಚರ್ಚ್ ರಸ್ತೆ 27, ತಾಲೂಕುಕಛೇರಿ ಪರಿಸರ 24, ಮಂಗಳೂರು- ಪಾಂಡೇಶ್ವರ 28, ಕಾಸರಗೋಡು-ಕಲ್ಲಕಟ್ಟ 33 ಹಾಗೂ ಕಾರಿಂಜ-ಹಳೆಮನೆ 28 ಮಿ.ಮೀ.ನಷ್ಟು ಮಳೆಯಾಗಿದೆ. ಈ ದಿನ ಮಳೆ ಭರ್ಜರಿ ಮಳೆ ಮುಂದುವರಿದಿದೆ.