ಸುಳ್ಯ:ಪೈಂಬೆಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ಯುವಜನ ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಸ್ವಚ್ಛತೆ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲೆಗೆ ಬಣ್ಣ
ಬಳಿಯುವ ಸಲುವಾಗಿ ಶಾಲೆಯ ಗೋಡೆಗಳನ್ನು ಸ್ವಚ್ಛಗೊಳಿಸಿ,ಮಹಡಿಯ ಮೇಲುಗಡೆ ಮತ್ತು ಪರಿಸರದಲ್ಲಿದ್ದ ಕಸಕಡ್ಡಿಗಳನ್ನು ತೆರವುಗೊಳಿಸಿದರು. ಶಾಲೆಯ ಹಂಚಿನ ಮಾಡು ಸೋರುತ್ತಿರುವ ಕಡೆ ಶ್ರಮದಾನದ ಮೂಲಕ ಸರಿಪಡಿಸಲಾಯಿತು.ಸ್ವಚ್ಛತೆ ಮತ್ತು ಶ್ರಮದಾನ ಕಾರ್ಯಕ್ರಮದಲ್ಲಿ
ನೌಶಾದ್ ಫಾಳಿಲಿ,ಕಬೀರ್.ಎನ್.ಎಂ,ರಹೀಂ ಪಿ.ಎಂ,ಸುಹೈಲ್ ಡಿ.ಎಂ,ಉವೈಸ್,ಫಾಯಿಝ್,ಸಮದ್,ಹಾರಿಸ್.ಸಿ.ಬಿ,ನಿಝಾರ್.ಟಿ.ಯಂ,ಹಸೈನಾರ್,ರಹೀಂ.ಡಿ.ಯಂ. ಇಬ್ರಾಹಿಂ,ಟಿ.ಎ,ನಾಸಿರ್ ಕೆ.ಹೆಚ್,ರಝಾಕ್ ಪಿ.ಎ ಮುಂತಾದವರು ಭಾಗವಹಿಸಿದ್ದರು. ಶ್ರಮದಾನದಲ್ಲಿ ಆಸಿಫ್.ಕೆ.ಎಂ, ರವೂಫ್ ಟಿ.ಯಂ, ಹಸೈನಾರ್ ಕೆ.ಯಂ, ಸಿದ್ದೀಕ್ ಟಿ.ಎ,ಹಾರಿಸ್ ಡಿ.ಯಂ ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾದ ಅಬ್ದುಲ್ಲ ಫೈಝಿ ಡಿ.ಯಂ. ರವರು ನೇತೃತ್ವ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿಯರಾದ ವಿಶಾಲಾಕ್ಷಿ ಹಾಗೂ ಸಹಶಿಕ್ಷಕಿ ಪ್ರತಿಮಾ ರವರು ಸಹಕರಿಸಿದರು.ಸು