ಸುಳ್ಯ: ಪೈಂಬೆಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ಸಮಿತಿ ಪುನರ್ರಚನೆಯು ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ
ಅಬ್ದುಲ್ಲ ಪೈಝಿ ಡಿ.ಯಂ.ಮತ್ತು ಉಪಾಧ್ಯಕ್ಷರಾಗಿ ಪುಷ್ಪಾವತಿ ಕುಡೆಂಬಿಯವರು ಆಯ್ಕೆಯಾದರು.ಸದಸ್ಯರುಗಳಾಗಿ
ಮಹಮ್ಮದ್ ರಫೀಕ್ ಪಿ.ಯಂ.,ಇಬ್ರಾಹಿಂ ಎಂ.ಪಿ, ಅಬ್ದುಲ್ ರವೂಫ್ ಟಿ.ಯಂ, ಮೂಸಕುಂಞಿ ಪಿ.ಯಂ, ಹಸೈನಾರ್ ಕೆ.ಯಂ. ಅಬ್ದುಲ್ ರಹಿಮಾನ್ ಪಿ.ಎ.,ಅಬ್ದುಲ್ ಅಲಿ.ಪಿ.ಯಂ,ಅಬ್ದುಲ್ ರಜಾಕ್ ಪಿ.ಎ,ಸಫ್ವಾನ್ ಪಿ.ಎ.ಪ್ರೇಮಲತಾ, ಉಷಾಕುಮಾರಿ,ಶುಭಾ ಪಾತುಮ,ಮರಿಯಮ್ಮ,ಶಾರದಾ ಮತ್ತು ಶ್ರೀಜಾ ಆಯ್ಕೆಯಾದರು. ಪದನಿಮಿತ್ತ ಸದಸ್ಯರುಗಳಾಗಿ ಶಾಲಾ ಮುಖ್ಯಶಿಕ್ಷಕಿ ವಿಶಾಲಾಕ್ಷಿ ವಿ.ಎಸ್, ಆರೋಗ್ಯ ಕಾರ್ಯಕರ್ತೆ ಮಧುಶ್ರೀ ಹಾಗೂ ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ ಅಯ್ಕೆಯಾದರು.
ನಾಮನಿರ್ದೇಶಿತ ಸದಸ್ಯರುಗಳಾಗಿ ಸ್ತಳೀಯ ಜನಪ್ರತಿನಿಧಿ ಧರ್ಮಪಾಲ ಕೊಯಂಗಾಜೆ, ಶಾಲಾ ಸಹ ಶಿಕ್ಷಕಿ ಪ್ರತಿಮಾ ಹಾಗೂ ಶಾಲಾ ನಾಯಕಿ ಯಶಸ್ವಿ ನೇಮಕಗೊಂಡರು.
ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಾದ ಗೀತಾ ಕೋಲ್ಚಾರು , ಕುಸುಮ ಬಿಲ್ಲರಮಜಲು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ತಿತರಿದ್ದರು. ಸಭೆಯಲ್ಲಿ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ವಿ ಎಸ್.ಸ್ವಾಗತಿಸಿ ವಂದಿಸಿದರು.