ಅಡ್ತಲೆ: ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಗಾಂಧಿ ನಡಿಗೆ, ಗಾಂಧಿ ಸ್ಮೃತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಿವೃತ್ತ ಯೋಧ ಕಮಲಾಕ್ಷ ಪಿಂಡಿಮನೆ ಗಾಂಧಿ ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ನೂರಾರು ಜನರೊಂದಿಗೆ ಸುಮಾರು ಒಂದು ಕಿಲೋಮೀಟರ್ ಸಾಗಿದ ಜಾಥಾವು ಅಡ್ತಲೆ ಶಾಲಾ ವಠಾರದಲ್ಲಿ ಸಮಾಪನಗೊಂಡಿತು.ಶಾಲಾ
ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಡ್ತಲೆ ಶಾಲಾ ಎಸ್.ಡಿ.ಎಂ. ಸಿ. ಅಧ್ಯಕ್ಷರಾದ ಗೋಪಾಲಕೃಷ್ಣ ಪಿಂಡಿಮನೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯೆ ಸುಜಯಾ ಲೋಹಿತ್ ಮೇಲಡ್ತಲೆ ದೀಪ ಬೆಳಗಿಸಿ, ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಯವರ ಭಾವಚಿತ್ರಗಳಿಗೆ ಪ್ರಥಮ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕಯಲ್ಲಿ ಪಂಚಾಯತ್ ಸದಸ್ಯರಾದ ಸುಜಯಾ ಲೋಹಿತ್, ಉಪಾಧ್ಯಕ್ಷರಾದ ಕುಮಾರಿ ಶ್ವೇತ ಅರಮನೆಗಯ, ನಿವೃತ್ತ ಯೋಧ ಕಮಲಾಕ್ಷ ಪಿಂಡಿಮನೆ,ಮುಖ್ಯ್ಯೊಪಾಧ್ಯಾಯರಾದ ಮಾಧವ ಪೂಜಾರಿಮನೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ ಅಡ್ತಲೆ, ಭವಾನಿ ಶಂಕರ ಅಡ್ತಲೆ ಮಾತನಾಡಿ ಗಾಂಧಿಜಿಯವರ ಗುಣಗಾನ ಮಾಡಿ ಅವರ ತತ್ವ,ಅದರ್ಶ ಗಳನ್ನು ಅನುಸರಿಸಲು ಕೋರಿದರು. ಗ್ರಾಮ ಪಂಚಾಯತ್
ಸದಸ್ಯ ಕೇಶವ ಅಡ್ತಲೆಯವರು ಗಾಂಧಿ ಸ್ಮೃತಿ ಭಾಷಣಗೈದು ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಜೊತೆಯಾಗಿ ಶ್ರಮಿಶೋಣ ಎಂದು ಕರೆ ನೀಡಿದರು.ನಂತರ
ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರು ಪಣೆ ಸ್ವಚ್ಛ, ದುಶ್ಚಟಮುಕ್ತ, ಭ್ರಷ್ಟಾಚಾರ ರಹಿತ, ಸೌಹಾರ್ದತೆ ಹಾಗೂ ಸಾಮರಸ್ಯದ ಆರೋಗ್ಯಪೂರ್ಣ ಗ್ರಾಮ ಸ್ವರಾಜ್ಯದ ಸಂಕಲ್ಪದ ಪ್ರತಿಜ್ಞಾ ವಿಧಿ ಭೋದಿಸಿದರು. ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಹಾಗೂ ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರು ಪಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ವಿನಯ್ ಬೆದ್ರು ಪಣೆ ಸ್ವಾಗತಿಸಿ ಹರಿಪ್ರಸಾದ್. ಎ. ಕೆ. ವಂದಿಸಿದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಸ್ಪಂದನ ಗೆಳೆಯರ ಬಳಗ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಊರ ಸಾರ್ವಜನಿಕರು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದರು.