ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.
ಗಾಂಧಿ ನಡಿಗೆ ಕಾರ್ಯಕ್ರಮಕ್ಕೆ ವರ್ತಕ ಸಂಘದ ಅಧ್ಯಕ್ಷರಾದ ಚಕ್ರಪಾಣಿ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ತನಕ ಪೇಟೆಯಲ್ಲಿ ಗಾಂಧಿ ನಡಿಗೆ ನಡೆಯಿತು. ನಂತರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ಗ್ರಾಮ ಸಭೆಗೆ ನಿವೃತ ಸೈನಿಕ ಮಾಜಿ ಪಂಚಾಯತ್ ಅಧ್ಯಕ್ಷರಾದ ಕೆ. ಪಿ. ಜಗದೀಶ್ ಗಾಂಧಿ ಫೋಟೋಗೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು. ಪಿ ಡಿ ಒ ಸರಿತಾ ಡಿಸೋಜಾ ವರದಿ ಗ್ರಾಮ ಸಭೆ ವಿಚಾರ ಮಂಡಿಸಿದರು. ಸಭೆಯಲ್ಲಿ ಕುಡಿಯುವ ನೀರಿನ ಕ್ರಿಯಾ ಯೋಜನೆ, ನಮ್ಮ ಗ್ರಾಮ ನಮ್ಮ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ವಿಚಾರ ವಿನಿಮಯ ನಡೆಯಿತು.
ಸಭೆಯ ನಂತರ ನಾರಾಯಣ ಬಂಗೇರ ಮನೆಯಲ್ಲಿ ಬಚ್ಚಲು ಗುಂಡಿಗೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಕೃ ಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ತೆಕ್ಕಿಲ್ ಪ್ರತಿಷ್ಠಾನದ ಶಾಹಿದ್ ಟಿ. ಎಂ, ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಅಬೂಸಾಲಿ ಪಿ. ಕೆ., ಸುಂದರಿ ಮುಂಡಡ್ಕ, ಜಗದೀಶ್ ರೈ , ಎಸ್. ಕೆ. ಹನೀಫ್, ಸವಾದ್ ಗೂನಡ್ಕ, ಸುಶೀಲ ಕೈಪಡ್ಕ, ಸುಮತಿ ಶಕ್ತಿವೇಲು, ವಿಜಯ ಅಲಡ್ಕ, ವಿಮಲಾ ಪ್ರಸಾದ್, ರಜನಿಶರತ್, ಸೊಸೈಟಿ ಉಪಾಧ್ಯಕ್ಷರಾದ ಮಹಮದ್ , ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದ ಕಟ್ಟೆ, ಕಿಪಾಯತುಲ್ಲ, ರಝಕ್ ಸೂಪರ್, ಅಶ್ರಫ್, ಕಲ್ಲುಗುಂಡಿ ಶಾಲಾ ಮಕ್ಕಳಿಂದ ಆಕರ್ಷಕ ಬ್ಯಾಂಡ್, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ, ಊರವರು ಭಾಗವಹಿಸಿದರು.
ಜಿ. ಕೆ. ಹಮೀದ್ ಸ್ವಾಗತಿಸಿ ಜಗದೀಶ್ ರೈ ವಂದಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement