ಸುಳ್ಯ: ಕಳೆದ ಕೆಲವು ದಿನಗಳಿಂದ ಸಂಜೆಯ ವೇಳೆಗೆ ಗುಡುಗು ಸಿಡಿಲಿನೊಂದಿಗೆ ಸ್ವಾತಿ ಮಳೆ ಅಬ್ಬರಿಸುತ್ತಿದ್ದರೆ ಸುಳ್ಯ ನಗರದ ಜನರಿಗೆ ಕತ್ತಲ ಭಾಗ್ಯ ಕರುಣಿಸುತ್ತದೆ. ಕಳೆದ ಕೆಲವು ದಿನಗಳಿಂದ ಸುಳ್ಯ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣ ದೇವ ಪ್ರತ್ಯಕ್ಷನಾಗುತ್ತಿದ್ದಂತೆ ವಿದ್ಯುತ್ ಮಾಯವಾಗುತ್ತದೆ. ಇಂದು ಸಂಜೆ 7 ಗಂಟೆಯ ವೇಳೆಗೆ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಆರಂಭವಾಗುತ್ತಿದ್ದಂತೆ ಮಾಯವಾದ ವಿದ್ಯುತ್ ರಾತ್ರಿ 10.30ರವರೆಗೂ ಪ್ರತ್ಯಕ್ಷವಾಗಿಲ್ಲ. ವಿಶ್ವ ಕಪ್ ಕ್ರಿಕೆಟ್ ನಲ್ಲಿ ಇಂಡಿಯಾ ನ್ಯೂಜಿಲ್ಯಾಂಡ್ ಮ್ಯಾಚ್ ನೋಡೋಣ ಎಂದು
ಕಾತರದಿಂದ ಕಾದು ಕುಳಿತವರಿಗೆ ನಿರಾಶೆ ಕಾದಿತ್ತು. ವಿದ್ಯುತ್ ಇಲ್ಲದೆ ಟಿವಿ ಯೂ ಇಲ್ಲ.. ಯಕಶ್ಚಿತ್ ಬೆಳಕು ಕೂಡ ಇಲ್ಲ. ಕಳೆದ ಭಾನುವಾರವೂ ಇದೇ ಪರಿಸ್ಥಿತಿ ಇತ್ತು. ಅಂದು ಇಂಡಿಯಾ-ಪಾಕಿಸ್ತಾನ ಮ್ಯಾಚ್ ನೋಡಲಾಗದೆ ಕ್ರಿಕೆಟ್ ಅಭಿಮಾನಿಗಳು ನಿರಾಶರಾಗಿದ್ದರು. ಕಳೆದ ಭಾನುವಾರದಿಂದ ಇಂದಿಗೆ ವಾರದ ಬಹುತೇಕ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಮಳೆ ಬಂದಿದೆ. ಮಳೆ ಬಂದ ದಿನಗಳಲ್ಲೆಲ್ಲ ವಿದ್ಯುತ್ ಕೈ ಕೊಟ್ಟು ಕತ್ತಲೆ ಭಾಗ್ಯ ಕರುಣಿಸಿದೆ.. ನಾಡಿಗೆ ನಾಡೇ ಕತ್ತಲಲ್ಲಿ ಮುಳುಗಿ ಮೌನಕ್ಕೆ ಶರಣಾಗಿದೆ.. ಇದು ಕೇವಲ ನಗರದ ಮಾತ್ರ ಸಮಸ್ಯೆ ಅಲ್ಲ.. ಗ್ರಾಮೀಣ ಭಾಗದಲ್ಲಿಯೀ ಇದೇ ಸಮಸ್ಯೆ.. ಅಲ್ಲಿ ಸ್ವಲ್ಪ ಹೆಚ್ಚೇ ಇದೆ.. ಒಂದು ಮಳೆ ಬಂದ ಕೂಡಲೇ ಕಡಿತಗೊಳ್ಳುವ ವಿದ್ಯುತ್ ಸಮಸ್ಯೆ ಸುಳ್ಯಕ್ಕೆ ಹೊಸತಲ್ಲ.. ಸುಳ್ಯ ನಗರದ ಇತಿಹಾಸದಷ್ಟೇ ಹಳೆಯ ಸಮಸ್ಯೆ..ಇದು. ಈ ಸಮಸ್ಯೆಗೆ ಪರಿಹಾರ ಯಾವಾಗ ಎಂಬುದು ಮಾತ್ರ ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ..