ಸುಳ್ಯ: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ತೆರಿಗೆ ಇಳಿಸಿದ ಬಳಿಕ ಹೊಸ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜಾರಿಗೆ ಬಂದಾಗ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ದರದಲ್ಲಿ ಬಾರೀ ವ್ಯತ್ಯಾಸ ಕಂಡು ಬಂದಿದೆ. ಕರ್ನಾಟಕಕ್ಕಿಂತ ಕೇರಳದಲ್ಲಿ ದರ ಹೆಚ್ಚಿದೆ.ದಕ್ಷಿಣ ಕನ್ನಡಕ್ಕಿಂತ ಕಾಸರಗೋಡು ಜಿಲ್ಲೆಯಲ್ಲಿ ಪೆಟ್ರೋಲ್ ಗೆ 5 ರೂ ಹೆಚ್ಚು ಮತ್ತು ಡೀಸೆಲ್ ಗೆ 7 ರೂಗಿಂತಲೂ ಹೆಚ್ಚು ದರ ಇದೆ. ಸುಳ್ಯದಲ್ಲಿ ಪೆಟ್ರೋಲ್ ದರ ಲೀಟರ್ ಗೆ 100.65 ರೂ ಮತ್ತು ಡೀಸೆಲ್ ದರ 85.04 ಇದ್ದರೆ ಕಾಸರಗೋಡಿನಲ್ಲಿ 105.38 ಮತ್ತಿ ಡೀಸೆಲ್ ಗೆ 92.69 ಇದೆ. ತಲಪ್ಪಾಡಿ ಗಡಿಯಲ್ಲಿ ಕೇರಳ
ಮತ್ತು ಕರ್ನಾಟಕದ ಪೆಟ್ರೋಲ್ ಪಂಪ್ ಗಳು ಇದೆ. ಕರ್ನಾಟಕದ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ದರ ರೂ.105.38 ಮತ್ತು ಡೀಸೆಲ್ ದರ 92.58 ಇದ್ದರೆ, ಕರ್ನಾಟಕದ ಪಂಪ್ ನಲ್ಲಿ ಪೆಟ್ರೋಲ್ ಗೆ ರೂ 99.90 ಮತ್ತು ಡೀಸೆಲ್ ದರ 84.36 ರೂ ಇತ್ತು. ಕೇಂದ್ರ ಸರ್ಕಾರ ಪೆಟ್ರೋಲ್ ಗೆ 5 ರೂ ಮತ್ತು ಡೀಸೆಲ್ ಗೆ 10 ರೂ ಅಬಕಾರಿ ತೆರಿಗೆ ಇಳಿಕೆ ಮಾಡಿತ್ತು.ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಮೇಲೆ ತಲಾ ರೂ 7 ಇಳಿಕೆ ಮಾಡಿತ್ತು. ಇದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಗೆ 13 ರೂ ಮತ್ತು ಡೀಸೆಲ್ ಗೆ 19 ರೂ ಇಳಿಕೆಯಾಗಿತ್ತು. ಆದರೆ ಕೇರಳ ಸರಕಾರ ರಾಜ್ಯದ ತೆರಿಗೆಯನ್ನು ಇಳಿಕೆ ಮಾಡಿಲ್ಲ. ಇದರಿಂದ ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬರಲು ಕಾರಣವಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ತೈಲ ಬೆಲೆಯಲ್ಲಿ ವ್ಯತ್ಯಾಸ
ಉಂಟಾಗಿರುವ ಹಿನ್ನಲೆಯಲ್ಲಿ ಸುಳ್ಯ ಸೇರಿದಂತೆ ಗಡಿ ಪ್ರದೇಶದ ಕರ್ನಾಟಕದ ಪಂಪ್ ಗಳಲ್ಲಿ ರಶ್ ಜಾಸ್ತಿ ಆಗುವ ಸಾಧ್ಯತೆ ಇದೆ. ಗಡಿ ಪ್ರದೇಶದ ಜನರು ಪೆಟ್ರೋಲ್, ಮತ್ತು ಡೀಸೆಲ್ ಗೆ ಕರ್ನಾಟಕದ ಪಂಪ್ ಗಳನ್ನು ನೆಚ್ಚಿ ಕೊಳ್ಳುವ ಸಾಧ್ಯತೆ ಇದೆ. ದ.ಕ ಮತ್ತು ಕಾಸರಗೋಡು ಗಡಿಯಲ್ಲಿ ಕರ್ನಾಟಕದ ಬಹುತೇಕ ಎಲ್ಲಾ ಪಟ್ಟಣಗಳಲ್ಲಿ ಪೆಟ್ರೋಲ್ ಪಂಪ್ ಇದೆ. ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ ಹಲವು ರಾಜ್ಯಗಳು ಕೂಡ ತೆರಿಗೆ ಇಳಿಸಿ ಗ್ರಾಹಕರ ಹೊರೆ ಕಮ್ಮಿ ಮಾಡಿದೆ. ಆದರೆ ಕೇರಳದಲ್ಲಿ ರಾಜ್ಯ ಸರಕಾರ ತೆರಿಗೆ ಇಳಿಸಿಲ್ಲ. ಕೇರಳವೂ ತೆರಿಗೆ ಕಮ್ಮಿ ಮಾಡಿ ತೈಲ ಬೆಲೆ ಇಳಿಸಬೇಕು ಎಂಬ ಒತ್ತಾಯವನ್ನು ಅಲ್ಲಿನ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾಡಿದೆ. ತೆರಿಗೆ ಇಳಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದಲೂ ಕೇಳಿ ಬಂದಿದೆ.