ಸಂಪಾಜೆ:ಸಂಪಾಜೆ ಗ್ರಾಮದ ನೆಲ್ಲಿಕುಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ವ್ಯಾಪ್ತಿಗೆ ಒಳಪಟ್ಟ ಶ್ರೀ ಮಧುರೈ ವೀರನ್ ಸ್ವಾಮಿ ಕಟ್ಟೆಗೆ ಕಾಡಾನೆ ದಾಳಿ ಮಾಡಿ ಹಾನಿಗೊಳಿಸಿದೆ. ಬಳಿ ದಿ. 21ರ ರಾತ್ರಿ ಕಾಡಾನೆ ದಾಳಿ ಮಾಡಿದ್ದು ಕಟ್ಟೆಗೆ ಹಾನಿ ಸಂಭವಿಸಿದೆ.ಸುಮಾರು ಅರ್ಧ ಶತಮಾನಗಳಷ್ಟು ಇತಿಹಾಸವುಳ್ಳ ದಿ.ಅಂಗಮುತ್ತು ಅವರು ಪ್ರತಿಷ್ಠೆ

ಮಾಡಿದ ಕಟ್ಟೆ ಇದಾಗಿದೆ. ಮಾಹಿತಿ ತಿಳಿದು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಪಳನಿವೇಲು, ಆಡಳಿತ ಅಧ್ಯಕ್ಷ ಶ್ರೀ ಜ್ಞಾನಶೀಲನ್(ರಾಜು) ಸಂಪಾಜೆ ಗ್ರಾ. ಪo. ಅಧ್ಯಕ್ಷ ಜಿ. ಕೆ. ಹಮೀದ್, ಸದಸ್ಯ ಎಸ್. ಕೆ. ಹನೀಫ್ , ಗ್ರಾಮಸ್ಥ ವಿಶ್ವಾಸ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.