ಸುಳ್ಯ:ಅರೆಭಾಷೆ ರಂಗಭೂಮಿ, ಸಿನಿಮಾ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಒಗ್ಗಟ್ಟಿನೊಂದಿಗೆ ಭಾಷೆ ಬೆಳವಣಿಗೆ, ಕಲಾವಿದರ ಶ್ರೇಯಾಭಿವೃದ್ದಿ ಮತ್ತು ಅರೆಭಾಷೆ ಕಲಾವೈಭವವನ್ನು ಸಿರಿವಂತಿಕೆ ಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ ರಚಿಸಲಾಯಿತು. ಸುಳ್ಯದ ಸಿ.ಎ. ಬ್ಯಾಂಕ್ ಸಭಾಭವನದಲ್ಲಿ ಜ.26 ರಂದು ನಡೆದ ಸಭೆಯಲ್ಲಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಮೋಂಟಡ್ಕ, ಉಪಾಧ್ಯಕ್ಷರಾಗಿ ಯೋಗೀಶ್ ಹೊಸೊಳಿಕೆ, ಪ್ರಧಾನ
ಕಾರ್ಯದರ್ಶಿ ವಿನೋದ್ ಮೂಡುಗದ್ದೆ, ಜೊತೆ ಕಾರ್ಯದರ್ಶಿ ಸುಶ್ಮಿತಾ ಮೋಹನ್, ಕಾರ್ಯದರ್ಶಿ ಸುಧೀರ್ ಏನೆಕಲ್ಲು, ಕೋಶಾಧಿಕಾರಿ ತೇಜೇಶ್ವರ್ ಕುಂದಲ್ಪಾಡಿ, ಪ್ರಧಾನ ಸಂಚಾಲಕರು ಭವಾನಿಶಂಕರ ಅಡ್ತಲೆ, ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕಾಟೂರು, ಗೌರವ ಸಲಹೆಗಾರರು ಕೆ. ಆರ್ ತೇಜಕುಮಾರ್, ಎ.ಕೆ ಹಿಮಕರ, ಕುಸುಮಾಧರ ಎ.ಟಿ, ವಿಶ್ವನಾಥ ಬದಿಕಾನ, ಜಯಪ್ರಕಾಶ್ ಕುಕ್ಕೆಟಿ, ಗಂಗಾಧರ ನೆಲ್ಲಿಕೋಡಿ, ಚಿದಾನಂದ ಪರಪ್ಪ ಹಾಗೂ ನಿರ್ದೇಶಕರಾಗಿ
ರಾಮಚಂದ್ರ ಸುಬ್ರಹ್ಮಣ್ಯ, ರಮ್ಯಾ ಶ್ರೀ ನಡುಮನೆ, ವಿಜಯಕುಮಾರ್ ದೇಂಗೋಡಿ, ಲೋಹಿತಾಶ್ವ ಪರಮುಂಡ, ಮಂಜುನಾಥ ಮಡ್ತಿಲ, ಪ್ರವೀಣ್ ಕಾಟೂರು, ಪ್ರಸನ್ನ ಐವರ್ನಾಡು, ಪುಷ್ಪರಾಜ್ ಏನೆಕಲ್ಲು, ಶಮಂತ್ ಕುದುರೆ ಮಜಲು, ಹಿತೇಶ್ ಕಾರ್ಜ, ಜೀವನ್ ಕರೆಮೂಲೆ, ಶ್ರುತಿ ಮೆದು, ಮಮತಾ ಕಲ್ಮಕಾರು, ಯೋಗಿತಾ ಬಂಗಾರಕೋಡಿ, ಹವಿನ್ ಗುಂಡ್ಯ, ಸಿಂಚನ ಗೌಡ ಪಾಂಬರು, ಅಭಿಜ್ಞಾ ಪೂಜಾರಿ, ಸುಜೀತ್ ಕಾಯರ್, ಮಿಥುನ್ ಸೋನ, ಯಕ್ಷಿತ್ ಚೆಂಬು, ರಕ್ಷಿತ್ ಪನ್ನಡ್ಕ, ರಾಧಿಕಾ ಪ್ರೀತಮ್ ಏನೆಕಲ್ಲು, ಅನನ್ಯ ಪರ್ವತಮುಖಿ, ಅನನ್ಯ ಕಾಟೂರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.