ಅಯ್ಯನಕಟ್ಟೆ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ‘ಅಯ್ಯನಕಟ್ಟೆ ಜಾತ್ರೆ’ ಜ.26 ರಿಂದ 29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಜ.28 ಹಾಗೂ 29 ರಂದು ಅಯ್ಯನಕಟ್ಟೆ ಜಾತ್ರೆಯು ಶ್ರೀಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ. ಜ.26 ರಂದು ಪೂ.9.30ರಿಂದ ತಂಟೆಪ್ಪಾಡಿ
ಶ್ರೀ ಶಿರಾಡಿ ದೈವದ ಸಾನ್ನಿಧ್ಯದಲ್ಲಿ ವಿಶೇಷ ತಂಬಿಲ ಸೇವೆ ,ನಾಗ ತಂಬಿಲ, 11 ರಿಂದ ಮೂರು ಕಲ್ಲಡ್ಕದಲ್ಲಿ ನಾಗತಂಬಿಲ ನಡೆಯಲಿದೆ ಜ. 27ರಂದು ಮೂರುಕಲ್ಲಡ್ಕದಲ್ಲಿ ಪೂ. 8-30 ರಿಂದ – ಮಹಾಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾಪೂಜೆ ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ , ಸಾಮೂಹಿಕ ಪ್ರಾರ್ಥನೆ , ಪ್ರಸಾದ ವಿತರಣೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಮೂರುಕಲ್ಲಡ್ಕದಲ್ಲಿ ಕನ್ನಡ ಕೋಗಿಲೆ ಖ್ಯಾತಿಯ- ಕಲಾವತಿ ದಯಾನಂದ ಅವರ ಕಲಾಸಿಂಧು ಸಂಗೀತ ಬಳಗ ಉಡುಪಿ ಇವರಿಂದ ಸುಗಮ ಸಂಗೀತ ನಡೆಯಲಿದೆ. ಜ.28ರಂದು ಬೆಳಗಿನ ಜಾವ 5 ಕ್ಕೆ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ತೋಟದಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಡುವುದು. 7ಕ್ಕೆ ಕಲ್ಲಮಾಡದಲ್ಲಿ ಉಳ್ಳಾಕುಲು ಶ್ರೀ ಮುಡಿ ದೈವಗಳ ನೇಮ ಗಂಧ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಮೂರುಕಲ್ಲಡ್ಕದಲ್ಲಿ ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. 7 ರಿಂದ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ
ಇದರಿಂದ – ಯಕ್ಷಗಾನ ಬಯಲಾಟ – ನೂತನ ಪ್ರಸಂಗ ನಡೆಯಲಿದೆ.ಜ.29 ರಂದು ಬೆಳಿಗ್ಗೆ 7.30ಕ್ಕೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ ಹೊರಡುವುದು. 8ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು,8ಕ್ಕೆ ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡುವುದು.10ಕ್ಕೆ ಕಲ್ಲಮಾಡದ ಬಳಿ ಶಿರಾಡಿ ,ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವಗಳ ನೇಮ, ಪ್ರಸಾದ ವಿತರಣೆ. 2.30ಕ್ಕೆ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ, 5ಕ್ಕೆ ಮಾರಿ ಹೊರಡುವುದು ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ.