ಬಾಳಿಲ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ 28, 29 ರಂದು ಜರುಗಲಿದೆ. ಇದರ ಸಿದ್ಧತೆಗಾಗಿ ನಡೆದ ಶ್ರಮ ಸೇವೆಯಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಸಹಾಯ ಸಂಘಗಳ ಬಾಳಿಲ-ಮುಪ್ಪೇರ್ಯ ಒಕ್ಕೂಟ ಹಾಗು

ಬಾಳಿಲದ ಸುಮಂಗಲ ಸಂಜೀವಿನಿ ಒಕ್ಕೂಟದ ಸದಸ್ಯರು ಮೂರುಕಲ್ಲಡ್ಕದಲ್ಲಿರುವ ದೈವಸ್ಥಾನ ಹಾಗೂ ಕಲ್ಲಮಾಡದ ಬಳಿ ಸ್ವಚ್ಛತಾ ಕಾರ್ಯ ನಡೆಸಿದರು.ತಂಟೆಪ್ಪಾಡಿಯಲ್ಲಿರುವ ಶಿರಾಡಿ ದೈವಸ್ಥಾನದ ಬಳಿ ಸ್ಥಳೀಯ ಕಾರ್ಯಕರ್ತರು ಚಪ್ಪರದ ಕೆಲಸ ನಡೆಸಿದರು. ಮನೆ ಮನೆ ಭೇಟಿ ಅಭಿಯಾನದ ಮೂಲಕ ಈಗಾಗಲೇ ಕಳಂಜ ಬಾಳಿಲ ಮುಪ್ಪೇರ್ಯ ಗ್ರಾಮಗಳ ಪ್ರತಿ ಮನೆಗೆ ಆಮಂತ್ರಣ ಪತ್ರಿಕೆಯನ್ನು ತಲುಪಿಸಲಾಗಿದ್ದು, 25 ರ ಸಂಜೆ ಬಾಳಿಲದಿಂದ ವೈಭವದ ಶೋಭಾಯಾತ್ರೆ ಮೂಲಕ ಭಕ್ತಾದಿಗಳು ಸಮರ್ಪಿಸುವ ಹಸಿರು ಕಾಣಿಕೆಯನ್ನು ಉಳ್ಳಾಕುಲು ದೇವಸ್ಥಾನಕ್ಕೆ ತರುವುದರೊಂದಿಗೆ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.