ಮಂಗಳೂರು:ದ.ಕ.ಜಿಲ್ಲೆಯಲ್ಲಿ ಜ.22ರಂದು 795 ಪಾಸಿಟಿವ್ ಬಂದಿದೆ. 3 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ.8.82 ಇದೆ. 992 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 5700 ಸಕ್ರಿಯ ಪ್ರಕರಣವಿದೆ. ಕಾಸರಗೋಡು ಜಿಲ್ಲೆಯಲ್ಲಿ ಜ.22ರಂದು 623 ಪಾಸಿಟಿವ್ ಬಂದಿದೆ. ಜ.22 ರಂದು ಸುಳ್ಯ ತಾಲೂಕಿನಲ್ಲಿ 27 ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಸದ್ಯ 93 ಸಕ್ರೀಯ ಪ್ರಕರಣ ಇದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement