ಸುಳ್ಯ:ಕೆಪಿಸಿಸಿ ಸದಸ್ಯತ್ವ ಪಡೆಯಲು ಇನ್ನು ಡಿಜಿಟಲ್ ನೋಂದಣಿ ಅಭಿಯಾನ ನಡೆಯಲಿದೆ. ಡಿಜಿಟಲ್ ನೋಂದಣಿ ಅಭಿಯಾನದ ಕೊಡಗು ಉಸ್ತುವಾರಿಯನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ಹಾಗು ಹಾಸನ ಜಿಲ್ಲೆಗೆ ಜಿಲ್ಲಾ ಪಂಚಾಯತ್ ಮಜಿ ಸದಸ್ಯ ಧನಂಜಯ ಅಡ್ಪಂಗಾಯ ಅವರನ್ನು ಉಸ್ತುವಾರಿಗಳಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕ ಮಾಡಿದ್ದಾರೆ. ಇವರು ನಿಯೋಜಿತ



ಜಿಲ್ಲೆಗಳ ವಿಧಾನಸಭಾವಾರು ಸದಸ್ಯತ್ವ ನೋಂದಣಿ ಕೋ-ಆಡಿನೇಟರ್ ಗಳಾಗಿ ಕೆಪಿಸಿಸಿಯಿಂದ ನಿಯೋಜನೆಗೊಂಡ ಇತರ ಉಸ್ತುವಾರಿ ನಾಯಕರುಗಳೊಂದಿಗೆ ನೋಂದಣಿ ಪ್ರಕ್ರಿಯೆ ಮುಗಿಯುವವರೆಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇದ್ದು ಜವಬ್ದಾರಿಯನ್ನು ವಹಿಸಿ ನೋಂದಣಿ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಜಿ.ಕೃಷ್ಣಪ್ಪ ಉಸ್ತುವಾರಿಯಾಗಿರುತ್ತಾರೆ. ದ.ಕ. ಜಿಲ್ಲೆಯಿಂದ ಮಾಜಿ ಸಚಿವ ರಮಾನಾಥ್ ರೈ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಅಭಯ್ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತ ಗಟ್ಟಿ, ಕೃಪಾ ಆಳ್ವ ನೇಮಕಗೊಂಡ ಇತರ ನೋಂದಣಿ ಉಸ್ತುವಾರಿ ನಾಯಕರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಿ ಎಲ್ ಶಂಕರ್, ಮಧು ಬಂಗಾರಪ್ಪ ,ಕೃಪಾ ಆಳ್ವ ನೋಂದಣಿ ಉಸ್ತುವಾರಿಯಾಗಿರುತ್ತಾರೆ ಎಂದು ಎಂದು ಟಿ.ಎಂ.ಶಹೀದ್ ತಿಳಿಸಿದ್ದಾರೆ.