ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ೨೦೨೧-೨೨ನೇ ಸಾಲಿನ ಮೆಕ್ಯಾನಿಕಲ್ ವಿಭಾಗದ ಫ್ರೆಶರ್ಸ್ ಡೆ ಆಚರಣೆ ನಡೆಯಿತು. ಪುತ್ತೂರು ಅರುಣ್ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅವಕಾಶಗಳು ಎಂಬ ವಿಷಯದ ಬಗ್ಗೆ ತಾಂತ್ರಿಕ ಉಪನ್ಯಾಸ
ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ನ ನಿರ್ದೇಶಕರಾದ ಡಾ. ಸುನೀಲ್ಕುಮಾರ್ ಮೋಂಟಡ್ಕ ಮತ್ತು ಪ್ರಶಾಂತ್ ಎಂ.ವಿ. ಅಸೋಸಿಯೇಶನ್ನ ಉಪಧ್ಯಾಕ್ಷ ಅಫ್ನಾನ್ ಅಹಮದ್ ಮತ್ತು ಕಾರ್ಯದರ್ಶಿ ಶ್ರೇಯಸ್ ಎಂ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿನಿ ಕೃತಿ ಎಸ್. ಪ್ರಾಥಿಸಿ, ದೇವಿಚರಣ್ ಸ್ವಾಗತಿಸಿದರು. ಶ್ರೇಯಸ್ ವಂದಿಸಿದರು. ಮಹಮದ್ ಅಫ್ರಾಜ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಭಾಗದ ಎಲ್ಲಾ ಉಪನ್ಯಾಸಕರು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.