ಸುಳ್ಯ: ಅಜ್ಜಾವರ ಗ್ರಾಮದ ನೀಲಗಿರಿ ಅಡ್ಕ ಎಂಬಲ್ಲಿ ಮುಖ್ಯ ರಸ್ತೆ ಬದಿಯ ಗೇರು ಬೀಜ ತೋಟಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ವರದಿಯಾಗಿದೆ. ಗೇರು ತೋಟದಾದ್ಯಂತ ಬೆಂಕಿಯ ಕೆನ್ನಾಲಿಗೆ
Advertisement



ವ್ಯಾಪಿಸಿ ಹೊತ್ತಿ ಉರಿದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಯು.ಬಿ.ರಾಜಗೋಪಾಲ್ ಹಾಗು ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯುತು. ಗೇರು ಅಭಿವೃದ್ಧಿ ನಿಗಮದ ಈ ಗೇರು ತೋಟದ ನೆಲದಲ್ಲಿರುವ ಒಣಗಿದ ಹುಲ್ಲು ಮತ್ತು ಕಾಡು ಹೊತ್ತಿ ಉರಿದಿದ್ದು ಗೇರು ಗಿಡಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement