ಸುಳ್ಯ: ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿ ತೆರೆಯುವ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ನಡೆಯಿತು. ಕಾಂತಮಂಗಲ ಕುರುಂಜಿಯಲ್ಲಿ ಪಯಸ್ವಿನಿ ತಟದ ಪ್ರಶಾಂತ ಸುಂದರ ಪರಿಸರದಲ್ಲಿರುವ ಶಿಲಾಮಯ ಗುತ್ಯಮ್ಮ ದೇವಿ ಕ್ಷೇತ್ರದಲ್ಲಿ ವರ್ಷದ ಇತರ ದಿನಗಳಲ್ಲಿ ಕ್ಷೇತ್ರದ ಬಾಗಿಲು ತೆರೆಯಲಾಗುತ್ತಿದ್ದರೂ ಗರ್ಭಗುಡಿಯ ಬಾಗಿಲು ಉತ್ಸವದ

ಸಂದರ್ಭದಲ್ಲಿ ಜ.31ರಂದು ಒಂದು ದಿನ ಮಾತ್ರ ತೆರೆದು ಆರಾಧನೆ ನಡೆಸಲಾಗುತ್ತದೆ ಎಂಬುದು ಇಲ್ಲಿನ ವಿಶೇಷತೆ. ಇಂದು
ಬೆಳಿಗ್ಗೆ 8 ರಿಂದ ಸ್ವಸ್ತಿ ಪುಣ್ಯಾಹವಾಚನೆ, ನವಗ್ರಮ ಹೋಮ, ದೈವಾರಾಧನೆ, ರುದ್ರ ಹೋಮ, ಚಂಡಿಕಾ ಹೋಮ ನಡೆಯಿತು. ಚಂಡಿಕಾ ಹೋಮ ಪೂರ್ಣಾಹುತಿ ನಡೆದ ಬಳಿಕ ಪ್ತಸಾದ ವಿತರಣೆ ಅನ್ನ ಸಂತರ್ಪಣೆ ನಡೆಯುತು. ಸಂಜೆ ರಂಗಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ಜ.29 ಮತ್ತು 30 ರಂದು ವಿವಿಧ ಕಾರ್ಯಕ್ರಮಗಳು ನಡೆಯಿತು. 29 ರಂದು ಕವಾಟ ಉದ್ಘಾಟನೆ ಆಗಿ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಕ್ಪಾಲಕ ಬಲಿ ನಡೆಯುತು. ಜ.30 ರಂದು ನವಕ ಪ್ರಧಾನ ಹೋಮ ನಾಗದೇವರಿಗೆ, ರಕ್ತೇಶ್ವರಿಗೆ ನವಕ ಪ್ರಧಾನ ಆಶ್ಲೇಷಾ ಬಲಿ, ಪವಮಾನ ಸೂಕ್ತ ಹೋಮ , ಪ್ರಸನ್ನ ಪೂಜೆ, ಪ್ರತ್ಯೇಕ ಪ್ರತ್ಯೇಕ ದೈವಗಳ ಉದ್ದಿಷ್ಯ ಪ್ರಧಾನ ಹೋಮ ನವ ಕಲಶಾರಾಧನೆ, ಗುತ್ಯಮ್ಮನವರಿಗೆ ಪ್ರಧಾನ
ಹೋಮ ಕಲಶಾರಾಧನೆ ಬ್ರಹ್ಮದೇವರಿಗೆ ಎಲ್ಲಾ ಸಾನಿಧ್ಯದಲ್ಲಿ ಕಲಶಾಭಿಷೇಕ ಪಂಚ ಪರ್ವ ಪ್ರಸನ್ನ ಪೂಜೆ ಸಂಧ್ಯಾಕಾಲ ದುರ್ಗಾನಮಸ್ಕಾರ ಪೂಜೆ ಸಪ್ತಶತೀ ಪಾರಾಯಣ ನಡೆಯಿತು.
ಗುತ್ಯಮ್ಮ ದೇವಿ ಮತ್ತು ಸಪರಿವಾರ ಕ್ಷೇತ್ರದ ಧರ್ಮದರ್ಶಿ ಹಾಗು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್, ಡಾ.ಜ್ಯೋತಿ ಆರ್.ಪ್ರಸಾದ್, ಪ್ರಮುಖರಾದ ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ, ಜಾಕೆ ಮಾಧವ ಗೌಡ, ಸಂತೋಷ್ ಜಾಕೆ, ಡಾ.ಉಜ್ವಲ್ ಯು.ಜೆ., ಬಿ.ಟಿ.ಮಾಧವ, ಪ್ರಸನ್ನ ಕಲ್ಲಾಜೆ, ನಾಗೇಶ್ ಕೊಚ್ಚಿ, ಅರುಣ್ ಕುರುಂಜಿ, ಯಶೋದಾ ರಾಮಚಂದ್ರ, ಭವಾನಿಶಂಕರ ಅಡ್ತಲೆ ಮತ್ತಿತರರು ಉಪಸ್ಥಿತರಿದ್ದರು