ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಜನ ಸ್ಪಂದನ ಕಾರ್ಯಕ್ರಮ ಸಂಪಾಜೆ ಗ್ರಾಮದ ರಾಜರಾಂಪುರ ಪರಿಶಿಷ್ಟ ಜಾತಿ ಕಾಲನಿಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ.. ಹಮೀದ್ ಅಧ್ಯಕ್ಷತೆಯಲ್ಲಿ 4ನೇ ವಾರ್ಡ್ ಮಟ್ಟದ ಜನ ಸ್ಪಂದನ ಸಭೆ ನಡೆಯಿತು. ಸಭೆಯಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಸೂಚಿಸಲಾಯಿತು. ಮೆಸ್ಕಾಂ ಇಲಾಖೆಯ ಪರವಾಗಿ ಜೂನಿಯರ್ ಇಂಜಿನಿಯರ್ ಅಭಿಷೇಕ್ ಮೆಸ್ಕಾಂ ಸಂಬಂಧಪಟ್ಟ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ವಾರ್ಡ್ ಮಟ್ಟದಲ್ಲಿ ಹಲವು ಮನೆಗಳಿಗೆ ಭೇಟಿ ಕೊಟ್ಟು ಸಮಸ್ಯೆ ವಿಚಾರಿಸಿದರು. ಅರಣ್ಯ ಇಲಾಖೆಯ ಪರವಾಗಿ ಅರಣ್ಯ ಪಾಲಕ ಚಂದ್ರು, ಭಾಗವಹಿಸಿ ಅರಣ್ಯ ಇಲಾಖೆಯ, ಸಮಸ್ಯೆಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಗ್ಯಾಸ್ ಯೋಜನೆ ಹಾಗೂ ಅಪಾಯಕಾರಿ ಮರಗಳ ತೆರವು, ಆನೆಗಳ ಹಾವಳಿ ಹಾಗೂ ಸಮಸ್ಯೆಗೆ ಪರಿಹಾರ ಇನ್ನಿತರ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು. ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ನಮಿತಾ ರವರು ಮಾಹಿತಿ ನೀಡಿದರು. ಗ್ರಾಮ ಕರಣಿಕರು ಗ್ರಾಮ ಮಟ್ಟದಲ್ಲಿ 94 ಸಿ ಹಕ್ಕು ಪತ್ರಕ್ಕೆ ಅರ್ಜಿ, ಸಂಧ್ಯಾ ಸುರಕ್ಷಾ ಯೋಜನೆ, ಇನ್ನಿತರ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿದರು. ಸ್ಥಳದಲ್ಲಿ ಅರ್ಜಿಗಳನ್ನು ಪರಿಶೀಲನೆ ಮಾಡಲಾಯುತು. ಪೊಲೀಸ್ ಇಲಾಖೆಯ ಗಿರೀಶ್, ಅರೋಗ್ಯ ಇಲಾಖೆಯ ಸಿ. ಎಚ್. ಓ. ಹರ್ಷಿತಾ ಪಿ. ಡಿ. ಓ. ಸರಿತಾ ಡಿಸೋಜಾ, ಕಲ್ಲುಗುಂಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ,ಸಜ್ಜನ ಪ್ರತಿಷ್ಠಾನದ ಕಾರ್ಯದರ್ಶಿ ರಹೀಮ್ ಬೀಜದಕಟ್ಟೆ, ಗ್ರಾ.ಪಂ. ಸದಸ್ಯರಾದ
ಸುಮತಿ ಶಕ್ತಿವೇಲು, ಎಸ್. ಕೆ. ಹನೀಫ್, ಅನುಪಮಾ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಅಬೂಸಾಲಿ,ಶೌವಾದ್ ಗೂನಡ್ಕ, ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್, ಮೋಹನ್ ರಾಜರಾಂಪುರ, ಬಸವ ಲಿಂಗಪ್ಪ,ಮಾಜಿ ಮಂಡಲ ಸದಸ್ಯ ಉಮ್ಮರ್ ಹಾಜಿ ಗೂನಡ್ಕ, ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಹಮದ್ ಕುಂಞ ಗೂನಡ್ಕ, ಕಾರ್ಮಿಕ ಮುಖಂಡ ಜಾನಿ ಕೆ. ಪಿ. ಕಲ್ಲುಗುಂಡಿ, ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್ ಮತ್ತಿತರರು ಭಾಗವಹಿಸಿದ್ದರು. ಪಂಚಾಯತ್ನ ಎಲ್ಲಾ 5 ವಾರ್ಡ್ಗಳಲ್ಲಿಯೂ ನಡೆಸಲಾಗುವುದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.