ಕೇಪ್ಟೌನ್: ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿತು.ಈ ಮೂಲಕ ಸರಣಿಯನ್ನು 3–0ಯಿಂದ ಕ್ಲೀನ್ ಸ್ವೀಪ್ ಮಾಡಿತು. ಈಮೂಲಕ ಟೆಸ್ಟ್, ಏಕದಿನ ಸರಣಿ ದಕ್ಷಿಣ ಆಫ್ರಿಕಾ ಪಾಲಾಯಿತು. ಶತಕ ದಾಖಲಿಸಿದ ಕ್ವಿಂಟನ್ ಡಿ ಕಾಕ್ ಗೆಲುವಿನ ರುವಾರಿ ಎನಿಸಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ
ಮಾಡಿಕೊಂಡ ಭಾರತ ತಂಡವು ಆರಂಭದಲ್ಲಿ ಯಶಸ್ಸು ಗಳಿಸಿತು. ದಕ್ಷಿಣ ಆಫ್ರಿಕಾ ತಂಡವು 70 ರನ್ಗಳಾಗುಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಆರಂಭಿಕ ಬ್ಯಾಟರ್ ಕ್ವಿಂಟನ್ (124; 130ಎಸೆತ, 12 ಬೌಂಡರಿ, 2 ಸಿಕ್ಸರ್) ಮತ್ತು ರಸಿ ವ್ಯಾನ್ ಡರ್ ಡಸೆನ್ (52; 59ಎಸೆತ, 4 ಬೌಂಡರಿ, 1 ಸಿಕ್ಸರ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 144 ರನ್ ಸೇರಿಸಿ ದರು. ಇದರಿಂದಾಗಿ ತಂಡವು 49.5 ಓವರ್ಗಳಲ್ಲಿ 287 ರನ್ ಗಳಿಸಿ ಆಲೌಟ್ ಆಯಿತು. ಕನ್ನಡಿಗ ಪ್ರಸಿದ್ಧ ಕೃಷ್ಣ ಮೂರು ವಿಕೆಟ್ಗಳನ್ನು ಗಳಿಸಿದರು.ಅದಕ್ಕುತ್ತರವಾಗಿ ಭಾರತ ತಂಡವು 49.2 ಓವರ್ಗಳಲ್ಲಿ 283 ರನ್ ಗಳಿಸಿ ಆಲೌಟ್ ಆಯಿತು. ತಂಡವು 223 ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡ
ಹಂತದಲ್ಲಿ ದೀಪಕ್ ಚಾಹರ್ (54; 34ಎಸೆತ) ಅಮೋಘ ಅರ್ಧಶತಕ ಗಳಿಸಿ, ತಂಡದಲ್ಲಿ ಜಯದ ಆಸೆ ಚಿಗುರಿಸಿದರು. ಅವರಿಗೆ ಜಸ್ಪ್ರೀತ್ ಬೂಮ್ರಾ (12; 15ಎ) ಉತ್ತಮ ಜೊತೆ ನೀಡಿದರು. ಆದರೆ ಜಯಕ್ಕೆ 10 ರನ್ ಇರುವಾಗ ಚಹರ್ ಔಟಾದ ಕಾರಣ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಭಾರತದ ಪರ ಕೆ.ಎಲ್. ರಾಹುಲ್ 9, ಶಿಖರ್ ಧವನ್ 61, ವಿರಾಟ್ ಕೊಹ್ಲಿ 65, ಶ್ರೇಯಸ್ ಅಯ್ಯರ್ 26, ಸೂರ್ಯಕುಮಾರ್ ಯಾದವ್ 39, ದೀಪಕ್ ಚಾಹರ್ 54, ಜಸ್ಪ್ರೀತ್ ಬೂಮ್ರಾ 12 ರನ್ ಗಳಿಸಿದರು.