ಪರ್ಲ್:ಭಾರತ ತಂಡ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿತು. ಬೊಲ್ಯಾಂಡ್ ಪಾರ್ಕ್ನಲ್ಲಿ 297 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಕೆ.ಎಲ್.ರಾಹುಲ್ ಬಳಗ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತು. ಈ ಮೂಲಕ 31 ರನ್ಗಳ ಸೋಲೊಪ್ಪಿಕೊಂಡಿತು. ಧವನ್ ಜೊತೆ ಮೊದಲ ವಿಕೆಟ್ಗೆ 46
ರನ್ಗಳನ್ನು ಸೇರಿಸಿ ಹಂಗಾಮಿ ನಾಯಕ ರಾಹುಲ್ ಔಟಾದರು. ನಂತರ ಧವನ್ ಮತ್ತು ಕೊಹ್ಲಿ 92 ರನ್ಗಳನ್ನು ಸೇರಿಸಿದರು. ಇಬ್ಬರೂ ಅರ್ಧಶತಕಗಳನ್ನು ಗಳಿಸಿದರು. ಈ ಜೊತೆಯಾಟ ಮುರಿದ ನಂತರ ಸತತವಾಗಿ ವಿಕೆಟ್ಗಳು ಉರುಳಿದವು. ಎಂಟನೇ ಕ್ರಮಾಂಕದ ಶಾರ್ದೂಲ್ ಠಾಕೂರ್ ಅರ್ಧಶತಕ ಗಳಿಸಿದರೂ ಅಷ್ಟರಲ್ಲಿ ಕಾಲ ಮಿಂಚಿತ್ತು. ಭಾರತದ ಪರ ಧವನ್ 79, ಕೊಹ್ಲಿ 51, ಶಾರ್ದೂಲ್ ಠಾಕೂರ್ 50 ರನ್ ಬಾರಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಕೊಂಚ ಎಡವಿದರೂ ನಾಯಕ, ಮೂರನೇ ಕ್ರಮಾಂಕದ ತೆಂಬಾ ಬವುಮಾ (110; 143 ಎಸೆತ, 8 ಬೌಂಡರಿ) ಮತ್ತು ಐದನೇ ಕ್ರಮಾಂಕದ ರಸಿ ವ್ಯಾನ್ ಡೆರ್ ಡುಸೆನ್ (ಔಟಾಗದೆ 129; 96 ಎಸೆತ, 9 ಬೌಂಡರಿ, 4 ಸಿಕ್ಸರ್) ಅವರ ಅಮೋಘ ಶತಕಗಳ ಬಲದಿಂದ ಸವಾಲಿನ ಮೊತ್ತ ಕಲೆ ಹಾಕಿತು. ಬವುಮಾ ಮತ್ತುGGG ಡುಸೆನ್ ಭಾರತದ ವಿರುದ್ಧ ಎರಡನೇ ವಿಕೆಟ್ಗೆ ದಾಖಲೆಯ 204 ರನ್ಗಳನ್ನು ಸೇರಿಸಿದರು.