ಕಡಬ:ಕೊರೋನಾ ಖಾಯಿಲೆಯ ಕಾಲಘಟ್ಟದಲ್ಲಿ ಜನರಿಗೆ ಅರೋಗ್ಯ ಸೇವೆ ನೀಡುವುದನ್ನು ಸರ್ಕಾರ ಸವಲಾಗಿ ಸ್ವೀಕರಿಸಿದೆ. ಕಳೆದ ಮೂರು ವರ್ಷಗಳಿಂದ ಅರೋಗ್ಯ ಇಲಾಖೆಯಲ್ಲಿ ನಿರೀಕ್ಷೆಗೂ ಮೀರಿದ ಸುಧಾರಣೆ ತರಲಾಗಿದೆ ದ. ಕ ಜಿಲ್ಲೆಯಲ್ಲಿ 16 ಅಮ್ಲಜನಕ ಉತ್ಪಾದನ ಘಟಕಗಳನ್ನು ಸ್ಥಾಪಿಸಿ ಅರೋಗ್ಯ ಕೇತ್ರದ ಸವಾಲಗಳನ್ನು ನಿಭಾಯಿಸಲು ಸರ್ವ ಸನ್ನದವಾಗಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು

ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಡಮಾಡಿದ ನೂತನ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದೆರಡು ಮೂರು ವರ್ಷಗಳಿಂದ ಕೊರೊನಾ ಜನರ ಜೀವ ಮತ್ತ ಜೀವನ ದಲ್ಲಿ ಸಾಕಷ್ಟು ಕೆಟ್ಟ ಪರಿಣಾಮ ಬೀರಿದೆ. ಇತ್ತೀಚಿನ ದಿನಗಳಲ್ಲಿ ಕೋರೊನಾ ಖಾಯಿಲೆ ನಮ್ಮಿಂದ ದೂರವಾಗುತ್ತಿದೆ ಎಂದು ಮೈಮರೆಯಬಾರದು. ಕೊರೊನಾ ನಿರ್ಮೂಲನೆಗೆ ಅರೋಗ್ಯ ಇಲಾಖೆ ನೀಡಿರುವ ಸೂಚನೆಯನ್ನು ಪ್ರತಿಯೊಬ್ಬರು ಪಾಲಿಸಿ ಸರ್ಕಾರದ ಜೊತೆ ಕೈಜೋಡಿಸಬೇಕು. ಜನರ ಸಹಭಾಗಿತ್ವದಿಂದ ಕೊರೊನಾ ಖಾಯಿಲೆಯನ್ನು
ದೂರವಾಗಿಸಬಹುದು ಎಂದರು.ಭಾರತೀಯ ಸ್ಟೇಟ್ ಬ್ಯಾಂಕ್ ಕಡಬ ಶಾಖಾ ವ್ಯವಸ್ಥಾಪಕ ಅಹಮ್ಮದ್ ಮಶೂರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ., ಕಡಬ ತಹಸೀಲ್ದಾರ್ ಬಿ.ಅನಂತ ಶಂಕರ್ ಮಾತನಾಡಿ ಶುಭಹಾರೈಸಿದರು.ಕಡಬ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪಕೀರ ಮೂಲ್ಯ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ಪ್ರಸ್ತಾವಿಸಿ ಸ್ವಾಗತಿಸಿದರು. ಕಡಬ ಸಮೂದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುಚಿತ್ರಾ ರಾವ್ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್ ಕೆ ನಿರೂಪಿಸಿದರು.