ಪೇರಡ್ಕ:ಸಂಪಾಜೆ ಗ್ರಾಮದ ಪೇರಡ್ಕ-ಗೂನಡ್ಕ ಮುಹಿದ್ದೀನ್ ಜುಮಾ ಮಸೀದಿಯ ಆವರಣ ಗೋಡೆ ರಚನೆಗಾಗಿ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಲ್ಲಿ ಮಂಜೂರಾದ ರೂ.10 ಲಕ್ಷ ಅನುದಾನದಲ್ಲಿ 2ನೇ ಕಂತಿನ ಹಣ ರೂ. 5 ಲಕ್ಷ ಬಿಡುಗಡೆಗೊಂಡಿದೆ. ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ತೆಕ್ಕಿಲ್
ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ಪ್ರಯತ್ನದ ಹಿನ್ನಲೆಯಲ್ಲಿ ಅನುದಾನ ಬಿಡುಗಡೆಗೊಂಡಿರುತ್ತದೆ. ಈ ಮೊದಲು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಮತ್ತು ಮಸೀದಿಯ ವಕ್ಫ್ ಸೊತ್ತುಗಳ ರಕ್ಷಣೆಗಾಗಿ ವಕ್ಫ್ನಿಂದ ರೂ.28ಲಕ್ಷ, ಕರ್ನಾಟಕ ಸರಕಾರದ ಪ್ರವಾಸೋಧ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿಮಾಣಕ್ಕೆ
ರೂ.59 ಲಕ್ಷ, ಪೇರಡ್ಕ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ರೂ. 5 ಕೋಟಿ, ಗೂನಡ್ಕ-ದರ್ಖಾಸ್ತು ಗ್ರಾಮೀಣ ರಸ್ತೆಗಳಿಗೆ ರೂ. 20 ಲಕ್ಷ ಅನುದಾನ ಬಂದಿತ್ತು ಎಂದು ಪ್ರಕಟಣೆ ತಿಳಿಸಿದೆ.