ಸುಳ್ಯ:ಸುಳ್ಯ ಅಂಬೆಟಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಳ್ಯ ತಾಲೂಕು ಪತ್ರಕರ್ತರ ಭವನ ಪ್ರೆಸ್ ಕ್ಲಬ್ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರು ರೂ.50 ಸಾವಿರ ರೂ. ಸಹಾಯ ಧನ ನೀಡಿದರು. ಪ್ರೆಸ್


ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರಿಗೆ 50 ಸಾವಿರದ ಚೆಕ್ ಹಸ್ತಾಂತರ ಮಾಡಿದರು.ಡಾ.ಉಜ್ವಲ್.ಯು.ಜೆ, ಪ್ರಸನ್ನ ಕಲ್ಲಾಜೆ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಖಜಾಂಜಿ ಯಶ್ವಿತ್ ಕಾಳಂಮನೆ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಶಿಲನ್ಯಾಸ ದಿನ ಮೊದಲ ಕಂತು 50 ಸಾವಿರ ಸಹಾಯ ಧನ ನೀಡಿದ್ದ ಅವರು ಎರಡು ಹಂತದಲ್ಲಿ ಒಟ್ಟು ಒಂದು ಲಕ್ಷ ರೂ ಸಹಾಯ ಧನ ನೀಡಿದ್ದಾರೆ. ಪ್ರೆಸ್ ಕ್ಲಬ್ ನಿರ್ಮಾಣಕ್ಕೆ ಗೂನಡ್ಕದ ಸಜ್ಜನ ಪ್ರತಿಷ್ಠಾನದ ವತಿಯಿಂದ 25 ಸಾವಿರ ರೂಗಳನ್ನು ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅವರು ಇಂದು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರಿಗೆ ಹಸ್ತಾಂತರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಪ್ರೆಸ್ ಕ್ಲಬ್ ಖಜಾಂಜಿ ಯಶ್ವಿತ್ ಕಾಳಂಮನೆ, ನಿರ್ದೇಶಕರಾದ ಕೃಷ್ಣ ಬೆಟ್ಟ, ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.