ಸುಳ್ಯ:ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸುಳ್ಯ ತಾಲೂಕು ಘಟಕದ ಮಹಾ ಸಭೆ ಜ.22 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ತಹಶೀಲ್ದಾರ್ ಅನಿತಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಅನುರಾಧಾ ಕುರುಂಜಿ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ರೆಡ್ ಕ್ರಾಸ್ ಸಮಿತಿ ಆಡಳಿತ ಮಂಡಳಿ ಸದಸ್ಯ ಸಚೇತ್ ಸುವರ್ಣ ರೆಡ್ ಕ್ರಾಸ್ ಕಾರ್ಯ ಚಟುವಟಿಕೆಯ

ಬಗ್ಗೆ ಮಾಹಿತಿ ನೀಡಿದರು.ರೆಡ್ ಕ್ರಾಸ್ನ ಮುಖ್ಯ ಉದ್ದೇಶ ಮಾನವ ಸೇವೆ ಮಾಡುವುದು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆ ಮಾಡುವ ಸಂಘಟನೆ ರೆಡ್ ಕ್ರಾಸ್ ಎಂದು ಅವರು ಹೇಳಿದರು. ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ ಕುಸುಮಾಧರ ಬಿ.ಕೆ ಮಾತನಾಡಿದರು. ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್, ರೆಡ್ ಕ್ರಾಸ್ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಪಿ.ಬಿ.ಸುಧಾಕರ ರೈ, ಸಿಎ ಗಣೇಶ್ ಭಟ್, ಸಂಜೀವ ಕುದ್ಪಾಜೆ, ಶಶಿಧರ ಶೆಟ್ಟಿ, ನವೀನ್ಕುಮಾರ್ ರೈ, ತಂಬಿನಮಕ್ಕಿ,ವಿನಯಕುಮಾರ್ ಬೆಳ್ಳಾರೆ, ಜಯಂತ ಶೆಟ್ಟಿ, ಪೃಥ್ವಿಕುಮಾರ್, ಡಾ.ರಂಗಯ್ಯ, ಕೆ.ಎಂ.ಮುಸ್ತಫ, ಹರೀಶ್ ಬಂಟ್ವಾಳ್, ಚಂದ್ರಶೇಖರ ಬಿಳಿನೆಲೆ, ಇಸ್ಮಾಯಿಲ್ ಪಡ್ಪಿನಂಗಡಿ, ಪದ್ಮಿನಿ,ರಮ್ಯ ಸುಜಿತ್, ತಿಪ್ಪೇಶಪ್ಪ, ಮಹಾದೇವ್ ಮತ್ತಿತರರು

ಉಪಸ್ಥಿತರಿದ್ದರು. ಡಾ.ಅನುರಾಧಾ ಕುರುಂಜಿ ಸ್ವಾಗತಿಸಿ ವಂದಿಸಿದರು.
ನೂತನ ಕಾರ್ಯಕಾರಿ ಸಮಿತಿ:
ರೆಡ್ ಕ್ರಾಸ್ ಸೊಸೈಟಿಯ ಸುಳ್ಯ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ವಿನಯ ಕುಮಾರ್, ಸಿಎ ಗಣೇಶ್ ಭಟ್, ಸಂಜೀವ ಕುದ್ಪಾಜೆ,ಪಿ.ಬಿ. ಸುಧಾಕರ ರೈ, ಇಸ್ಮಾಯಿಲ್ ಪಡ್ಪಿನಂಗಡಿ, ಕೆ.ಎಂ.ಮುಸ್ತಫ, ಪದ್ಮಿನಿ, ಪೃಥ್ವಿಕುಮಾರ್, ಎಂ.ಆರ್.ಚಂದ್ರಕಾಂತ್, ಅನುರಾಧಾ ಕುರುಂಜಿ, ಮಹಾದೇವ್,ನವೀನ್ಕುಮಾರ್ ತಂಬಿನಮಕ್ಕಿ ಆಯ್ಕೆಯಾದರು.