ಕಲ್ಲುಗುಂಡಿ: ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಆಚರಿಸಲಾಯಿತು . ಜಮಾಅತ್ ಅಧ್ಯಕ್ಷ ಅಬ್ಬಾಸ್ ಹಾಜಿಯವರು ಧ್ವಜಾರೋಹಣ ನೆರವೇರಿಸಿದರು. ಖತೀಬರಾದ ಅಹ್ಮದ್ ನಈಂ ಫೈಝಿ ಮಅ’ಬರಿಯವರು ಗಣರಾಜ್ಯೋತ್ಸವದ ಸಂದೇಶ ನೀಡಿದರು. ಮದರಸಾದ ಎಸ್ಕೆ.ಎಸ್.ಬಿ.ವಿ ವಿದ್ಯಾರ್ಥಿಗಳಿಂದ ಬಾಲ ಇಂಡಿಯಾ ಕಾರ್ಯಕ್ರಮ ನಡೆಯಿತು . ದೇಶಭಕ್ತಿ ಗೀತೆಯನ್ನು ಹಾಡಿದ ವಿದ್ಯಾರ್ಥಿಗಳಿಗೆ ಮದ್ರಸ ಪ್ರಾಧ್ಯಾಪಕರಾದ ಅಬ್ದುನ್ನಾಸಿರ್ ಫೈಝಿಯವರು ದೇಶ ಬದ್ಧತೆಯ ಪ್ರತಿಜ್ಞಾವಿಧಿ ಬೋಧಿಸಿದರು.ಮದ್ರಸಾ ಅಧ್ಯಾಪಕರು,ಊರ ಹಿರಿಯರು , ಆಡಳಿತ ಸಮಿತಿ ಸದಸ್ಯರು , ಪೋಷಕರು ಮತ್ತು ಯುವಕರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement