ಅರಂತೋಡು: ಬದ್ರಿಯಾ ಜುಮ್ಮಾಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಮದರಸ ವತಿಯಿಂದ 73ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು. ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಧ್ವಜಾರೋಹಣ ಗೈದರು.ಬಳಿಕ ನಡೆದ ಸಭಾ ಕಾರ್ಯಕ್ರಮ ವನ್ನು ನುಸ್ರತುಲ್ ಇಸ್ಲಾಂ ಮದರಸ ಸಹಾಯಕ
ಅಧ್ಯಾಪಕ ಸಾಜಿದ್ ಅಝ್ಝಹರಿ ದುವಾ ನೆರವೇರಿಸಿದರು. ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕರಾದ ಹನೀಫ್ ದಾರಿಮಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್,ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಅಧ್ಯಾಪಕ ಅಬ್ದುಲ್ ಮಾಸ್ಟರ್ ಶುಭಹಾರೈಸಿದರು, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಮಜೀದ್, ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್,ಜಮಾ ಅತ್ ಸಮಿತಿ ಕೊಶಾಧಿಕಾರಿ ಬದ್ರುದ್ದೀನ್ ಪಟೇಲ್,ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಅಶೀಕ್ ,ಕಾರ್ಯದರ್ಶಿ ಮುಝಮ್ಮಿಲ್,ಸುಳ್ಯ ಎಸ್ ಕೆ ಎಸ್ ಎಸ್ ಎಫ್ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು, ಜುಬೈರ್,ಬಾತಿಶಾ,ಮೈೂದುಕುಟ್ಟಿ ಮೊದಲಾದವರು ಉಪಸ್ಥಿತರಿದ್ದರು .ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿ ಝಿಯಾದ್ ಪ್ರತಿಜ್ಞಾ ವಿಧಿ ಭೋದಿಸಿದರು,ನಿಯಾಝ್ ದೇಶಭಕ್ತಿ ಗೀತೆ ಹಾಡಿದರು. ಮಜೀದ್ ಸ್ವಾಗತಿಸಿ ವಂದಿಸಿದರು.