ಅರಂತೋಡು:ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮತ್ತು ಇತರ ಶೈಕ್ಷಣಿಕ ಸಂಘಗಳ ಸಹಕಾರದೊಂದಿಗೆ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ಮತ್ತು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಪಾಪ್ಯುಲರ್ ಎಜುಕೇಶನ್ ಸೊಸೈಟಿ
ನಿರ್ದೇಶಕರಾದ ಜತ್ತಪ್ಪ ಮಾಸ್ತರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಎಸ್. ವಹಿಸಿ, ಶುಭ ಹಾರೈಸಿದರು. ಶಾಲಾ ಮುಖ್ಯಗುರು ಸೀತಾರಾಮ ಎಂ. ಕೆ. ಅರಂತೋಡು ತೋಡಿಕಾನ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಕುಸುಮಾಧರ ಅಡ್ಕಬಳೆ, ಎನ್ಎಸ್ಎಸ್ ಕಾರ್ಯಕ್ರಮಾ ಧಿಕಾರಿ ಮೋಹನ್ ಚಂದ್ರ , ದೈಹಿಕ ಶಿಕ್ಷಕಿ ಶಾಂತಿ ,ಶ್ರೀ ಜಯರಾಮ್ , ಸ್ಕೌಟ್ ಮಾರ್ಗದರ್ಶಕರಾದ ಶ್ರೀ ಮನೋಜ್ ಕುಮಾರ್ , ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದ ಮಾರ್ಗದರ್ಶಕರಾದ ಪದ್ಮಕುಮಾರ್ ಮತ್ತು ಇತರ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.