ಸುಳ್ಯ:ಸರಕಾರಿ ಕೆಲಸಕ್ಕಾಗಿ ಮಾತ್ರ ಕಾಯದೆ ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗಕ್ಕೆ ಮಹತ್ವ ನೀಡಬೇಕು. ಸ್ವ ಉದ್ಯೋಗ ನಿರ್ವಹಣೆಗಾಗಿ ಸರಕಾರದಿಂದ ಹಲವು ಯೋಜನೆಗಳಿವೆ. ಅದನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ದೇಶದ ಆರ್ಥಿಕತೆ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದ್ದಾರೆ.ಅವರು ಸುಳ್ಯ ತಾಲೂಕು

ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ೨೦೨೧-೨೨ ನೇ ಸಾಲಿನ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ವಿತರಣೆ ಮತ್ತು ವಸತಿ ಯೋಜನೆಗಳ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿ ಅರಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕು ಎನ್ನುವ ದೃಷ್ಟಿಯಲ್ಲಿ ಪಾರದರ್ಶಕತೆಯ ಮೂಲಕ ಜನರಿಗೆ ತಲುಪಿಸಿಸುವ ಕೆಲಸ ಮಾಡುತ್ತಿದೆ. ಸ್ವ ಉದ್ಯೋಗಕ್ಕೆ ಮಹತ್ವ ನೀಡುವ ಉದ್ದೇಶದಿಂದ ಸ್ವ ಉದ್ಯೋಗ ಮೇಳವನ್ನು ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪಂಜ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮ, ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎನ್. ಭವಾನಿಶಂಕರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಜ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 17 ನಿವೇಶನ ರಹಿತರಿಗೆ ನಿವೇಶನದ ಹಕ್ಕುಪತ್ರಗಳ ವಿತರಣೆ, ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಎಂಎವೈ ಯೋಜನೆಯಲ್ಲಿ ಮಂಜೂರಾದ 24ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಮತ್ತು 9 ಕುಟುಂಬಗಳ ಮನೆ ದುರಸ್ಥಿಗೆ ಚೆಕ್ ವಿತರಣೆ ಮಾಡಲಾಯಿತು. 2 ಮಂದಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು. ಕೈಗಾರಿಕಾ ಇಲಾಖೆಯಿಂದ 7 ಮಂದಿ ಮರದ ಕೆಲಸ ಮಾಡುವವರು, ಎಲೆಕ್ಟ್ರಿಕಲ್ ವೃತ್ತಿ ಮಾಡುವ ಒಬ್ಬರಿಗೆ, 2 ಮಂದಿ ಕಮ್ಮಾರಿಕೆ , ಟೈಲರಿಂಗ್ ಮಾಡುವ 15 ಮಂದಿ, ಗಾರೆ ಕೆಲಸ ಮಾಡುವ 7 ಮಂದಿಗೆ ಸುಧಾರಿತ ಉಚಿತ ಉಪಕರಣಗಳನ್ನು ವಿತರಿಸಲಾಯಿತು.