ನವದೆಹಲಿ:ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಈ ಬಾರಿ ‘ಕರ್ನಾಟಕ ಕರಕುಶಲ ಕಲಾವೈಭವ’ ಧ್ಯೇಯದ ಅನ್ವಯ ಸ್ತಬ್ದಚಿತ್ರ ಪ್ರದರ್ಶನವಾಗಿದೆ. ಇಳಕಲ್ ಸೀರೆ, ಚನ್ನಪಟ್ಟಣದ ಬೊಂಬೆ ಜೊತೆಗೆ ಜಿಐ ಟ್ಯಾಗ್ ಪಡೆದಿರುವ 16 ಕರಕುಶಲ ವಸ್ತುಗಳ ಅನಾವರಣವಾಗಿದೆ.ಪರೇಡ್ನಲ್ಲಿ 12 ರಾಜ್ಯಗಳ ಸ್ತಬ್ದಚಿತ್ರಗಳುಪ್ರದರ್ಶನವಾಗಿವೆಸತತ 13ನೇ ವರ್ಷವೂ ಕರ್ನಾಟಕದ ಸ್ತಬ್ದಚಿತ್ರಗಳು ಗಣರಾಜ್ಯೋತ್ಸವ

ಪರೇಡ್ಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ದಚಿತ್ರ ಕರ್ನಾಟಕದ್ದಾಗಿದೆ.
ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರು ಬೀಟೆ ಮರ ಮತ್ತು ದಂತದ ಕಸೂತಿ ಇರುವ ಆನೆಯ ಕಲಾಕೃತಿ ರಚಿಸಲಾಗಿತ್ತು.
ಕಲಾಕೃತಿ ಕೆಳಭಾಗದಲ್ಲಿ ಯಕ್ಷಗಾನ ಬೊಂಬೆಯಾಟ ಮತ್ತು ಗಂಜೀಫಾ ಕಲೆಗಳ ಚಿತ್ರಣ ರಂಗು ತಂದಿತ್ತು. ಮಧ್ಯಭಾಗದಲ್ಲಿ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಹೂಜಿ ಇದ್ದು, ಇದರ ಪಕ್ಕದಲ್ಲಿ ಕರಾವಳಿಯ ಭೂತಾರಾದನೆ ಬಿಂಬಿಸುವ ಲೋಹದ ಮುಖವಾಡಗಳು ಮನ ಸೆಳೆದವು.ಇದರ ಹಿಂಬದಿಯಲ್ಲಿ ಬಿದರಿ ಕಲೆಯಲ್ಲಿ ಅರಳಿದ ನವಿಲುಗಳು, ಮಧ್ಯೆ ಕಿನ್ನಾಳ ಕಲೆಯಲ್ಲಿ

ನಿಮಿಇಸಿದ ಆಂಜನಯ ಮೂರ್ತಿ ಇತ್ತು. ಇದರ ಅಕ್ಕಪಕ್ಕದಲ್ಲಿ ಚನ್ನಪಟ್ಟಣದ ಬೊಂಬೆಗಳು, ನವಲಗುಂದದ ಧರಿ, ಶ್ರೀಗಂಧ ಕೆತ್ತನೆಯ ಕಲಾಕೃತಿಗಳು ವೈಭವ ಹೆಚ್ಚಿಸಿತು. ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಿದ ಕಮಾದೇವಿ ಚಟ್ಟೋಪಾಧ್ಯಾಯ ಅವರು ಗಂಧದ ಪೆಟ್ಟಿಗೆಗಳು ಹಾಗೂ ಬಾಳೆ ನಾರಿನ ಚೀಲ ನೀಡುತ್ತಿರುವ ದೊಡ್ಡ ಪ್ರತಿಮೆ ವಿಶೇಷ ಆಕರ್ಷಣೆಯಾಗಿತ್ತು. ಇಳಕಲ್ ಸೀರೆ, ಮೊಳಕಾಲ್ಮೂರು ಸೀರೆ, ಮೈಸೂರು ರೇಷ್ಮೆ ಸೀರೆ, ಕಿನ್ನಾಳ ಕಲೆಯಿಂದ ತಯಾರಾದ ಕಲಾಕೃತಿಗಳು ಗಮನ ಸೆಳೆದವು.