ಬನಾರಿ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ವಿಶೇಷ ಯಕ್ಷಗಾನ ತಾಳಮದ್ದಳೆ ‘ದಕ್ಷಯಜ್ಞ’ ಜರುಗಿತು. ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಗಂಟಾಮಣಿ ಸಮರ್ಪಣೆಯೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂದಕಿಶೋರ ಬನಾರಿ ಪೂಜಾ ಕಾರ್ಯಕ್ರಮವನ್ನು
ನೆರವೇರಿಸಿಕೊಟ್ಟರು. ಸಂಘದ ಹಿರಿಯ ಭಾಗವತರಾದ ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ಮುನ್ನಡೆದ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಶಶಾಂಕ ಎಲಿಮಲೆ, ದಯಾನಂದ ಬಂದ್ಯಡ್ಕ ಹಾಗೂ ನಿತೀಶ್ ಕುಮಾರ್ ಎಂಕಣ್ಣಮೂಲೆ ಅವರು ಭಾಗವಹಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ಭರತ್ ಉಳ್ಳೂರು, ಯಂ.ರಮಾನಂದ ರೈ ದೇಲಂಪಾಡಿ, ರಾಮನಾಯ್ಕ ದೇಲಂಪಾಡಿ, ಬಿ.ಹೆಚ್. ವೆಂಕಪ್ಪ ಗೌಡ, ರಾಮಯ್ಯ ರೈ ಕಲ್ಲಡ್ಕ ಗುತ್ತು ಮತ್ತು ಐತ್ತಪ್ಪ ಗೌಡ ಮುದಿಯಾರು ಅವರು ತಮ್ಮ
ವಾಗ್ವೈಖರಿಯಿಂದ ಕಲಾಭಿಮಾನಿಗಳ ಗಮನ ಸೆಳೆದರು. ಮಮತ ಪ್ರಸಾದ್ ಬೆಳ್ಳಿಪ್ಪಾಡಿ ಅವರು ಸ್ವಾಗತಿಸಿ ಲತಾ ಆಚಾರ್ಯ ಬನಾರಿ ವಂದಿಸಿದರು.ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಮತ್ತು ಮಮತಾ ಬೆಳ್ಳಿಪ್ಪಾಡಿ ಇವರ ಪುತ್ರಿ ತಶ್ಮಿಯ ಜನ್ಮದಿನದ ಪ್ರಯುಕ್ತ ವಿಶೇಷ ಯಕ್ಷಗಾನ ತಾಳಮದ್ದಳೆ ನಡೆಯಿತು.