ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಕಡಬ ಮತ್ತು ಸುಳ್ಯ ತಾಲೂಕಿನ ಗ್ರಾಮ ಮಟ್ಟದ ವಿಎಲ್ಇ ಕಾರ್ಯನಿರ್ವಾಹಕರ ತರಬೇತಿ ಕಾರ್ಯಗಾರ ನಡೆಯಿತು. ಮಾನವ ಸಂಪ್ಮೂಲ ವಿಭಾಗದ ನಿರ್ದೇಶಕಿ ಮಮತಾ ಹರೀಶ್ ರಾವ್ ಉದ್ಘಾಟಿಸಿದರು. ಗ್ರಾಮ ಮಟ್ಟದ ಕಾರ್ಯನಿರ್ವಾಹಕರ
ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಗಾರವು ಉಪಯುಕ್ತವಾಗಿದೆ, ಜನ ಸಾಮಾನ್ಯರಿಗೆ ಸರಕಾರದ ಸೌಲಭ್ಯ ಸುಲಭ ರೀತಿಯಲ್ಲಿ ಸಿಗುವಂತಾಗಲಿ, ಸಾಮಾನ್ಯ ಸೇವಾಕೇಂದ್ರ ತುಂಬಾ ಸಹಕಾರಿಯಾಗಿದೆ, ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಿರಿ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ೨ ರ ನಿರ್ದೇಶಕ ಪ್ರವೀಣ್ ಕುಮಾರ್, ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಗೋಪಾಲ್ ಆಚಾರ್ಯ, ತಾಲೂಕಿನ ಯೋಜನಾಧಿಕಾರಿ ಚೆನ್ನಕೇಶವ, ದಕ್ಷಿಣ ಜಿಲ್ಲಾ ಪಂಚಾಯತ್ನ ಸಮನ್ವಯಾಧಿಕಾರಿ ಅವಿನಾಶ್, ತರಬೇತಿ ಸಂಸ್ಥೆಯ ಉಪನ್ಯಾಸಕಿ ಸುಷ್ಮಾ, ಜಿಲ್ಲಾ ನೋಡೆಲ್ ಅಧಿಕಾರಿ ಕವಿತಾ, ಸುಳ್ಯ ಮತ್ತು ಕಡಬ ತಾಲೂಕಿನ ಹಣಕಾಸು ಪ್ರಬಂಧಕರು ಮತ್ತು ನೋಡೆಲ್ ಅಧಿಕಾರಿಗಳು ಹಾಗೂ ೨ ತಾಲೂಕಿನ ವಿಎಲ್ಇಗಳು ಉಪಸ್ಥಿತರಿದ್ದರು.