ಉಡುಪಿ:ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯ ಮಂಗಳವಾರ ನಡೆಯಿತು. ಪರ್ಯಾಯದ ಅಂಗವಾಗಿ ಮಂಗಳವಾರ ಮುಂಜಾನೆ 2.15 ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಪರ್ಯಾಯ ಪೀಠಾಧಿಪತಿ ಮೆರವಣಿಗೆಯಲ್ಲಿ ಸಾಗಿಬಂದು ಅಷ್ಟಮಠಾಧೀಶರ ಜೊತೆ ರಥಬೀದಿಯಲ್ಲಿ

ಮುಂಜಾನೆ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣದೇವರ ದರ್ಶನ ಮಾಡಿ, ಚಂದ್ರಮೌಳೀಶ್ವರ ದೇವರ, ಅನಂತೇಶ್ವರನ ದೇವರ ಮತ್ತು ಮಧ್ವಾಚಾರ್ಯರ ಸನ್ನಿಧಿಯ ದರ್ಶನ ಪಡೆದರು.5.25 ರ ಶುಭ ಮುಹೂರ್ತದಲ್ಲಿ ನಿರ್ಗಮನ ಪರ್ಯಾಯ ಪೀಠಾಧಿಪತಿ ಅದಮಾರು ಶ್ರೀ ಈಶಪ್ರಿಯತೀರ್ಥರು, ಶ್ರೀ ವಿದ್ಯಾಸಾಗರತೀರ್ಥರನ್ನು ಸ್ವಾಗತಿಸಿದರು. ಶ್ರೀಕೃಷ್ಣ ದೇವರ ದರ್ಶನ ಪಡೆದು ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು.5.55 ಕ್ಕೆ ಮಧ್ವಾಚಾರ್ಯರ ಸನ್ನಿಧಿಯ ಎದುರು ಅದಮಾರು ಮಠಾಧೀಶರು ಕೃಷ್ಣಾಪುರ ಮಠಾಧೀಶರಿಗೆ ಅಕ್ಷಯ ಪಾತ್ರೆ ಹಸ್ತಾಂತರ ಮಾಡಿದರು. 5.55 ಕ್ಕೆ ನಾಲ್ಕನೇ ಬಾರಿಗೆ ಪವಿತ್ರ ಸರ್ವಜ್ಞ ಪೀಠರೋಹಣಗೈದರು.
ಶ್ರೀ ಕೃಷ್ಣಾಪುರ ಯತಿಶ್ರೀ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯದ ಮೊದಲ ದಿನ ಶ್ರೀ ಕೃಷ್ಣನಿಗೆ ಬೆಳಗ್ಗೆ 10 ಗಂಟೆಗೆ ಮಹಾಪೂಜೆ ನೆರವೇರಿಸಿದರು. 10.30 ಪಲ್ಲಪೂಜೆ, ನೆರವೇರಿತು.