ಸುಳ್ಯ:ಸುಳ್ಯ ತಾಲೂಕಿನಲ್ಲಿ ಜ.22 ರಂದು ಲಸಿಕಾ ಅಭಿಯಾನ ನಡೆಯಲಿದೆ. 1790 ಡೋಸ್ ಕೋವಿಶೀಲ್ಡ್ ಮತ್ತು 100 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಡೋಸ್ ಲಸಿಕೆ ಲಭ್ಯವಿದೆ.ತಾಲೂಕಿನಲ್ಲಿ
ಬೆಳ್ಳಾರೆ, ಗುತ್ತಿಗಾರು,ಪಂಜ, ಸುಬ್ರಹ್ಮಣ್ಯ ಆರೋಗ್ಯ ಕೇಂದ್ರ, ಮರ್ಕಂಜ ಉಪಕೇಂದ್ರ, ಆಲೆಟ್ಟಿ ,ಸಂಪಾಜೆ, ಮಂಡೆಕೋಲು ಪಂಚಾಯತ್, ಜಯನಗರ, ಕಲ್ಲುಮುಟ್ಲು ಅಂಗನವಾಡಿ ಕೇಂದ್ರ, ಐವರ್ನಾಡು, ಪೆರುವಾಜೆ ಪಂಚಾಯತ್, ನೆಲ್ಲೂರು ಕೆಮ್ರಾಜೆ ಪಂಚಾಯತ್, ಕುಕ್ಕುಜಡ್ಕ, ಮೆಟ್ಟಿನಡ್ಕ ಅಂಗನವಾಡಿ ಕೇಂದ್ರ, ದೇವಚಳ್ಳ ಪಂಚಾಯತ್, ಕಂದ್ರಪ್ಪಾಡಿ ಶಾಲೆ, ಕಲ್ಮಕ್ಕಾರ್ ಶಾಲೆ, ಮಡಪ್ಪಾಡಿ ಪಂಚಾಯತ್, ಪಾಂಡಿಗದ್ದೆ ಅಂಗನವಾಡಿ ಕೇಂದ್ರ, ಎಡಮಂಗಲ,ಇಂದ್ರಾಜೆ ಉಪಕೇಂದ್ರ, ಬಳ್ಪ, ಕೇನ್ಯ, ಏನೆಕಲ್ಲು ಉಪಕೇಂದ್ರಗಳಲ್ಲಿ ಮತ್ತು ಮನೆ ಮನೆ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.