ಸುಳ್ಯ:ಸುಳ್ಯ ನಗರ ಪಂಚಾಯಿತಿ ನ ಕಲ್ಲುಮುಟ್ಲು ರೇಚಕ ಸ್ಥಾವರದ ಜಾಕ್ವೆಲ್ನಲ್ಲಿ ಹೂಳು ತುಂಬಿಕೊಂಡಿದ್ದು ಪೂರ್ಣಪ್ರಮಾಣದಲ್ಲಿ ನೀರೆತ್ತಲು ಸಾಧ್ಯವಾಗದಿರುವುದರಿಂದ ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ಗುರುವಾರದಿಂದ ಹೂಳು ತೆಗೆಯುವ ಕೆಲಸವು ನಡೆಯಲಿದ್ದು ಮುಂದಿನ ಸೋಮವಾರದ ವೇಳೆಗೆ ಕೆಲಸ ಸಂಪೂರ್ಣಗೊಂಡು
ಮತ್ತೆ ನೀರು ಸರಬರಾಜು ವ್ಯವಸ್ಥೆ ಸರಿ ಗೊಳ್ಳಲಿದೆ. ಇದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.ಹಾಗಾಗಿ ನಗರದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು.. ಅಲ್ಲದೆ ಯಾವುದಾದರೂ ಭಾಗದಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಇಲ್ಲದಿದ್ದಲ್ಲಿ ಅಲ್ಲಿಗೆ ವಾಹನದ ಮೂಲಕ ನೀರನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಈ ರೀತಿ ತೊಂದರೆಗಳಿದ್ದಲ್ಲಿ ನಗರ ಪಂಚಾಯತ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಅದೇ ನಗರ ಪಂಚಾಯಿತಿನ ನೀರು ಸರಬರಾಜು ಕುರಿತು ದೂರುಗಳಿದ್ದಲ್ಲಿ ಅಧ್ಯಕ್ಷರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ (9448445677) ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.