ಸಂಪಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರವನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಜಿ. ಕೆ. ಉದ್ಘಾಟಿಸಿದರು. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಲ್ಯಾಪ್ ಟಾಪ್
ಹಸ್ತಾಂತರಿಸಿ ಶುಭಹಾರೈಸಿದರು. ಸಂಪಾಜೆ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಸಿಎಸ್ಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಉಚಿತವಾಗಿ ಈ ಶ್ರಮ ಕಾರ್ಡ್ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಎಸ್.ಕೆ.ಹನೀಫ, ಸೇವಾಪ್ರತಿನಿಧಿಗಳಾದ ತಾರ, ಜಯಲಕ್ಷ್ಮಿ, ಸುಮಿತ್ರ, ವಿಪತ್ತು ನಿರ್ವಹಣೆ ಘಟಕ ಸಂಯೋಜಕ ಚಿದಾನಂದ ಹಾಗೂ ಸದಸ್ಯರು ಒಕ್ಕೂಟ ಅಧ್ಯಕ್ಷ ಯುತಿನ್ ಪ್ರಸಾದ್, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.