ಆಂಟಿಗುವಾ: ಅಂಡರ್-19 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಜಯ ಸಾಧಿಸುವ ಮೂಲಕ ಯುವ ಇಂಡಿಯಾ ಐದನೇ ಬಾರಿ ಕಪ್ ಎತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 44.5 ಓವರ್ಗಳಲ್ಲಿ 189 ರನ್ಗೆ ಅಲೌಟ್ ಆಯಿತು. ಜಾರ್ಜ್ ರೆವ್

ಹೋರಾಟದ 95 ರನ್ ಸಿಡಿಸಿದರು. ರಾಜ್ ಬವಾ ಕೇವಲ 31 ರನ್ಗೆ 5 ವಿಕೆಟ್ ಕಿತ್ತರು.ರವಿಕುಮಾರ್ 4 ವಿಕೆಟ್ ಉರುಳಿಸಿದರು.ಗುರಿ ಬೆನ್ನತ್ತಿದ ಟೀಂ ಇಂಡಿಯಾ 47.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಶೇಖ್ ರಶೀದ್ (50), ನಿಶಾಂತ್ ಸಿಂಧು (ಔಟಾಗದೆ 50) ಅರ್ಧಶತಕ ಬಾರಿಸಿದರು. ಇಂಗ್ಲೆಂಡ್ ತಂಡವನ್ನು ಮಣಿಸಿ ದಾಖಲೆ ಐದನೇ ಬಾರಿಗೆ ಯು-19 ಕ್ರಿಕೆಟ್ ವಿಶ್ವಕಪ್ ಗೆದ್ದುಕೊಂಡ ಭಾರತೀಯ ತಂಡದ ಪ್ರತಿ ಆಟಗಾರರಿಗೆ ತಲಾ 40 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯರ್ಶಿ ಜಯ್ ಶಾ ಘೋಷಿಸಿದ್ದಾರೆ. ಅಂತೆಯೇ ತಂಡದ ಎಲ್ಲ ಬೆಂಬಲ ಸಿಬ್ಬಂದಿಗೆ ತಲಾ 25 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ್ದಾರೆ.